ಅಂತಾರಾಷ್ಟ್ರೀಯ
ನಿಷೇಧದ ಬಳಿಕ ಚೀನಾದಿಂದಲೇ ಹೊರಬರಲು ನಿರ್ಧರಿಸಿದ ಟಿಕ್ ಟಾಕ್ !

ಅಮೆರಿಕಾದಲ್ಲಿ ಟಿಕ್ ಟಾಕ್ ನಿಷೇಧ ಮಾಡಿದರೆ ಕಂಪನಿ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ. ಅಮೆರಿಕಾ ಮತ್ತು ಭಾರತದಲ್ಲಿ ಅತೀ ಹೆಚ್ಚು ಟಿಕ್ ಟಾಕ್ ಬಳಕೆದಾರರಿದ್ದರು.ಭಾರತದಲ್ಲಿ ಈಗಾಗಲೇ ನಿಷೇಧ ಹೇರಿರುವುದರಿಂದ ಸಂಸ್ಥೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.ಹೀಗಾಗಿ ಟಿಕ್ ಟಾಕ್ ನ ಮಾತೃ ಸಂಸ್ಥೆ ಬೈಟ್ ಡ್ಯಾನ್ಸ್ ಚೀನಾದಿಂದ ಹೊರಬಂದು ಬೇರೆ ರಾಷ್ಟ್ರದಲ್ಲಿ ತನ್ನ ಮುಖ್ಯ ಕಚೇರಿ ತೆರೆದು ತಾನು ಚೀನಾದಿಂದ ಪ್ರತ್ಯೇಕವಾಗಿರುವುದಾಗಿ ಸಂದೇಶ ನೀಡಲು ತೀರ್ಮಾನಿಸಿದೆ. ಹೀಗಾದರೂ ಜಾಗತಿಕ ಮಟ್ಟದಲ್ಲಿ ತನ್ನ ಮೇಲೆ ಹಲವು ರಾಷ್ಟ್ರಗಳು ನಿರ್ಬಂಧ ವಿಧಿಸಲು ತೀರ್ಮಾನಿಸುವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದೆ.