
ಉಡುಪಿಯಲ್ಲಿ ಇಂದು 100 ಕರೋನ ಪೊಸಿಟಿವ್ ಪ್ರಕರಣ ದಾಖಲಾಗಿದೆ. ಬಹಳ ದಿನಗಳ ನಂತರ ಕರೋನಾ ಪ್ರಕರಣ ನೂರರ ಗಡಿ ದಾಟಿ ಇರುವುದು ಆಘಾತಕಾರಿಯಾದರೂ 80 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಇರುವುದು ಆಶಾದಾಯಕ.
ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1895 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 1462 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಸದ್ಯ ಜಿಲ್ಲೆಯಲ್ಲಿ ಒಟ್ಟು 428- ಸಕ್ರಿಯ ಪ್ರಕರಣಗಳಿವೆ