
ಮಂಗಳೂರಿನಲ್ಲಿ ಕೊರೋನ ಸಂಖ್ಯೆಯ ದೃಷ್ಟಿಯಿಂದ ಗಣನೀಯವಾಗಿ ಇಳಿಯುವ ಎಲ್ಲಾ ಸಾಧ್ಯತೆ ಇದೆ ಎಂಬ ಸುದ್ದಿ ಬಂದಿದೆ . ಅದು ಹೇಗೆ ಮಾರಾಯರೇ ಎಂದು ಉಬ್ಬು ಏರಿಸಿ ಪ್ರಶ್ನೆ ಮಾಡಬಹುದು . ಮೊನ್ನೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಒಂದು ಹೇಳಿಕೆ ಈ ಕೊರೋನಾ ಸಂಖ್ಯೆ ಕಡಿಮೆ ಮಾಡುವಂತಾಗಿದೆಯಂತೆ.
ಸಚಿವರು ಹೇಳಿದ್ದು ಏನು ? ಮಂಗಳೂರಿನ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಪೀಡಿತರಿಗೆ ಮುಕ್ತ ಚಿಕಿತ್ಸೆ ಮತ್ತು ಔಷಧ ನೀಡಲಾಗುವದು. ಈ statement ಸಚಿವರ ಬಾಯಲ್ಲಿ ಬಂದಿದ್ದೇ ತಡ ಅನೇಕ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಶಂಕಿತರನ್ನು ನಿಮಗೆ ಕೊರೋನ ಸೋಂಕು ಇಲ್ಲ ಮನೆಗೆ ಹೋಗಿ ಎಂದು ಕಳಿಸಿದ್ದು. ಅಲ್ಲದೇ ಬೇರೆ ಬೇರೆ ರೋಗಿಗಳನ್ನೂ ಕೊರೋನಾ ಪೀಡಿತ ಎಂದು ಒಂದು ಹಾಸಿಗೆ ಸಿದ್ಧಗೊಳಿಸಿ ಅವರನ್ನು ಮಲಗಿಸುತ್ತಿದ್ದವರನ್ನು ನಿಜವಾದ ಅವರ ರೋಗಕ್ಕೆ ಔಷಧ ಕೊಟ್ಟು ಕಳಿಸುವಂತಾಗಿದೆಯಂತೆ.
ಇದೊಂದು ಅದ್ಭುತ ಬೆಳವಣಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗುತ್ತಿರುವದು ಶುಭ ಸೂಚಕವೇ ಆಗಿದೆ . ಇದು ತಿಳಿದೋ ತಿಳಿಯದೆಯೋ ಸಚಿವ ಶ್ರೀನಿವಾಸ ಪೂಜಾರಿ ಅವರ ಒಂದು ಹೇಳಿಕೆಯಿಂದ ಆದ ಬದಲಾವಣೆಗೆ ಸಚಿವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜನತೆ ಅಭಿನಂದಿಸಲಿ.
ಹಾಗೂ ಇದೇ ಮಾದರಿಯಲ್ಲಿ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಹೇಳಿಕೆ ನೀಡಿ ಅನುಷ್ಠಾನಕ್ಕೆ ತರಲಿ ಎಂಬ ಸೂಚನೆ ಮತ್ತು ಕಳಕಳಿಯ ಹಾರೈಕೆ . ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಹಿರಿಯರು ಮಾಡಿಟ್ಟ ಗಾದೆ ಸುಮ್ಮನೇ ಅಲ್ಲ. ನೆನಪಿನಲ್ಲಿ ಇರಲಿ.
ಗೌರೀಶ್ ಶಾಸ್ತ್ರಿ ಹಿರಿಯ ಪತ್ರಕರ್ತರು.