
ಮಲ್ಪೆ: ಇಲ ಲಕ್ಹ್ಮೀನಗರ ಗರ್ಡೆಯ ಬಾಲಕನಿಗೆ ನೆರೆಮನೆಯ ವಿದ್ಯುತ್ ಪಂಪ್ ಮೇಲೆತ್ತುವಾಗ ಶಾಕ್ ತಗಲಿ ಸಾವನ್ನಾಪ್ಪಿದ ದುರ್ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಈ ದುರ್ಘಟನೆಯಲ್ಲಿ ಮೃತ ಬಾಲಕ ಗೌತಮ್ (16) ತನ್ನ ಮನೆಯ ಪಕ್ಕದ ಮನೆಗೆ ದಿನ ನಿತ್ಯ ಆಟವಾಡಲು ಹೋಗುತ್ತಿದ್ದ, ನಿನ್ನೆ ಕೂಡ ಅವರ ಮನೆಗೆ ಹೋಗಿದ್ದಾಗ ಮನೆಯವರೊಂದಿಗೆ ಸೇರಿ ಬಾವಿಯ ವಿದ್ಯುತ್ ಪಂಪ್ ಮೇಲಕ್ಕೆ ಎತ್ತಲು ಪ್ರಯತ್ನಿಸುತ್ತುರುವಾಗ ಶಾಕ್ ತಗಲಿ ಸಾವನ್ನಾಪ್ಪಿದ್ದಾನೆಂದು ತಿಳಿದು ಬಂದಿದೆ.
ಬಾಲಕ ಮೊನ್ನೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದ ಎಂದು ತಿಳಿದು ಬಂದಿದೆ .