
ಕರೋನಾ ಸೋಂಕು ತಡೆಗಟ್ಟಲು ಸರಕಾರದಿಂದ ಹೊಸ ಯೋಜನೆ ಜಾರಿಯಾಗುತ್ತಿದೆ. ದಿನಂಪ್ರತಿ ಕರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಕಂಡು ಹಿಡಿಯುವವರೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಉಚಿತವಾಗಿ ಆಯುರ್ವೇದ ಔಷಧಿ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯಿಂದ ಪ್ರಥಮವಾಗಿ ಪ್ರಾರಂಭಿಸಿ ಪ್ರತಿ ಮನೆಯ ಪ್ರತಿ ಸದಸ್ಯರಿಗೂ ಆರೋಗ್ಯ ಕಿಟ್ ನೀಡಲಾಗುವುದು . ಔಷಧ ನೀಡಲು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಲಾಗುತ್ತದೆ ಎಂದು ಹೇಳಿದ್ದಾರೆ .
ಅತಿ ಶೀಘ್ರವಾಗಿ ಪ್ರಾರಂಭವಾಗುವ ಈ ಯೋಜನೆಯನ್ನು ಡಾಕ್ಟರ್ ಗಿರಿಧರ್ ಕಜೆ ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ . ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಂಟಿ ಆಶ್ರಯದಲ್ಲಿ ಈ ಯೋಜನೆ ಜಾರಿಯಾಗುವುದು ಎಂದು ತಿಳಿಸಿದ್ದಾರೆ.