ಕೊರೊನ ವಾರಿಯಸ್೯ಗಳಿಗೆ ಸ್ಪಿರುಲಿನಾ ಕಡಲೆ ಚಿಕ್ಕಿ ವಿತರಣೆ

ಕಾರ್ಕಳ : ರೋಟರಿ ಆನ್ಸ್ ಕ್ಲಬ್ ಕಾರ್ಕಳ ಹಾಗೂ ಸರಕಾರಿ ಆಸ್ಪತ್ರೆಯ ಸಹಯೋಗೊಂದಿಗೆ
ಸ್ಪಿರುಲಿನಾ ಕಡಲೆ ಚಿಕ್ಕಿ ಹಂಚುವ ಕಾರ್ಯಕ್ರಮಕ್ಕೆ ಜುಲೈ 20, 2020 ಶಾಸಕರಾದ ಸುನಿಲ್ ಕುಮಾರ್ ಇವರು ಅವರ ಕಚೇರಿಯಲ್ಲಿ ಚಾಲನೆ ನೀಡಿದರು. ಈ ವಿಶೇಷ ಚಿಕ್ಕಿಯನ್ನು ಸುನಿಲ್ ಕುಮಾರ್ ಅವರು ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿ ಈ ಕಾರ್ಯವನ್ನು ಶ್ಲಾಘಿಸಿದರು.
ನಂತರ ತಮ್ಮ ಜೀವವನ್ನು ಪಣಕ್ಕಿಟ್ಟು covid-19 ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ಇಮ್ಮ್ಯೂನಿಟಿ ಹೆಚ್ಚಿಸುವ ಸ್ಪಿರುಲಿನಾ ಕಡಲೆ ಚಿಕ್ಕಿಯನ್ನು ವಿತರಿಸುವ ಕಾರ್ಯಕ್ರಮವು ಸರಕಾರಿ ಆಸ್ಪತ್ರೆ ಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷ ರೋ ರಮಿತಾ ಶೈಲೇಂದ್ರ ರಾವ್, ಕಾರ್ಯದರ್ಶಿ ಸುಮಾ ನಾಯಕ್, ವೃಂದಾ ಹರಿಪ್ರಕಾಶ್ ಶೆಟ್ಟಿ, ರೋ ಡಿ. ಕೆ ಸತೀಶ್, ರೋ ಬಾಲಕೃಷ್ಣ, ರೋ ಸುರೇಶ್ ನಾಯಕ್ ಹಾಗೂ ರೋ ಶೈಲೇಂದ್ರ ರಾವ್, ರೋಟೇರಿಯನ್ ಇಕ್ಬಾಲ್ ಅಹಮದ್, ರೋಟೇರಿಯನ್ ಚೇತನ್ ನಾಯಕ್ ಮತ್ತು ನವೀನ್ ನಾಯಕ್ ಉಪಸ್ಥಿತರಿದ್ದರು.