ರಾಮಮಂದಿರ ಶಿಲಾನ್ಯಾಸಕ್ಕೆ ಉಡುಪಿಯ ನೀರು, ಮಣ್ಣು ರವಾನೆ.

ರಾಮಮಂದಿರ ಶಿಲಾನ್ಯಾಸಕ್ಕೆ ಉಡುಪಿಯ ನೀರು, ಮಣ್ಣು ರವಾನೆಮಾಡಲಾಗಿದ್ದು
ವಿಶ್ವ ಹಿಂದು ಪರಿಷತ್ ಗೆ ದೇಶಾದ್ಯಂತ ಮೃತ್ತಿಕೆ- ಜಲ ಸಂಗ್ರಹ ಜವಾಬ್ದಾರಿ ನೀಡಲಾಗಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಆಗಸ್ಟ್ 5 ರಂದು ನಡೆಯಲಿದ್ದು, ಶಿಲಾನ್ಯಾಸದ ಸಂದರ್ಭ ದೇಶದ ಪವಿತ್ರ ಕ್ಷೇತ್ರಗಳ ಮಣ್ಣು ಮತ್ತು ನೀರು ಬಳಸಲಾಗುತ್ತದೆ.
ರಾಮಮಂದಿರ ಶಿಲಾನ್ಯಾಸ ಹಿನ್ನೆಲೆಯಲ್ಲಿ ದೇಶದ ಪವಿತ್ರ ಕ್ಷೇತ್ರಗಳಿಂದ ಮಣ್ಣು ಮತ್ತು ಪವಿತ್ರ ನದಿಗಳಿಂದ ನೀರು ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ವಿಶ್ವ ಹಿಂದೂ ಪರಿಷತ್ ನಿಂದ ನೀರು, ಮಣ್ಣು ಸಂಗ್ರಹ ಪ್ರಕ್ರಿಯೆ ಆರಂಭಗೊಂಡಿದೆ. #ಉಡುಪಿಯ ಪವಿತ್ರ ಮಣ್ಣಿಗೆ ಅದಮಾರು ಈಶಪ್ರೀಯ ಶ್ರೀಗಳು ಪೂಜೆ ಸಲ್ಲಿಸಿ, ಕೃಷ್ಣನ ಗಂಧ ಪ್ರಸಾದ ಅರ್ಪಿಸಿ ಪ್ರಾರ್ಥಿಸಿದರು.
#ಉಡುಪಿಯ ಪವಿತ್ರ ನೀರು ಮತ್ತು ಮಣ್ಣನ್ನು ಕೃಷ್ಣ ಮಠದ ಗರ್ಭಗುಡಿಯ ಮುಂಭಾಗ ಇಟ್ಟು ಪರ್ಯಾಯ ಸ್ವಾಮೀಜಿಯವರು ವಿಶೇಷ ಪೂಜೆ ನೆರವೇರಿಸಿದರು.
ಸಂಗ್ರಹಿಸಿ ಪೂಜಿಸಿದ ಮಣ್ಣು ನೀರನ್ನು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಗಂಧ ಪ್ರಸಾದವನ್ನು ಇಟ್ಟು ಶ್ರೀಗಳು ವಿಶ್ವ ಹಿಂದೂ ಪರಿಷತ್ ಮುಖಂಡರಿಗೆ ಅದನ್ನು ಸ್ವಾಮೀಜಿ ಹಸ್ತಾಂತರಿಸಿದರು.
ಆಗಸ್ಟ್ 5 ರಂದು ಮಂದಿರ ಶಿಲಾನ್ಯಾಸ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು ದೇಶದ ಪವಿತ್ರ ಪ್ರಸಿದ್ಧ ಕ್ಷೇತ್ರಗಳಿಂದ ಬಂದ ನೀರು ಮತ್ತು ಮಣ್ಣನ್ನು ಶಿಲಾನ್ಯಾಸ ಸಂದರ್ಭ ಬಳಸಲಾಗುತ್ತದೆ.