
ಉಡುಪಿ, ಜು.24: ಕೋವಿಡ್-19 ಉಡುಪಿ ಜಿಲ್ಲೆಯಲ್ಲಿ ಜುಲೈ 24 ಶುಕ್ರವಾರ 190 ಜನರಲ್ಲಿ ಪಾಸಿಟಿವ್ ಕಂಡು ಬಂದಿದೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಕೊರೋನಾ ಬಾಧಿತರ ಸಂಖ್ಯೆ 3036 ಆಗಿದೆ.
ಜುಲೈ 24 ತನಕ 1929 ಮಂದಿ ಬಾಧಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 1096 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿಯ ತನಕ 26,783 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, 23,136 ನೆಗೆಟಿವ್ ಬಂದಿದೆ. 3,036 ಪಾಸಿಟಿವ್ ಬಂದಿದೆ. 611 ಮಾದರಿಗಳ ವರದಿ ಬಾಕಿ ಇದೆ.ಜಿಲ್ಲೆಯಲ್ಲಿ ಈ ತನಕ 14 ಸಾವು ಜಿಲ್ಲೆಯಲ್ಲಿ ಸಂಭವಿಸಿದೆ.
ರಾಜ್ಯದಲ್ಲಿ ಇಂದು 5007 ಜನರಲ್ಲಿ ಪಾಸಿಟಿವ್ ಕಂಡು ಬಂದಿದೆ. 110 ಜನರ ಇಂದು ಕೊರೋನಾದಿಂದ ರಾಜ್ಯದಲ್ಲಿ ಮೃತ ಪಟ್ಟಿದ್ದಾರೆ.