
ಇಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ *ಕೋವಿಡ್ ಸುರಕ್ಷಾ ಪಡೆ, ಶಿವಮೊಗ್ಗ* ವತಿಯಿಂದ ದೇಶದಲ್ಲೇ ಪ್ರಪ್ರಥಮವಾಗಿ ಶಿವಮೊಗ್ಗ ನಗರದ ಪ್ರತಿ ಕುಟುಂಬಗಳಿಗೆ ಉಚಿತವಾಗಿ *ಆರೋಗ್ಯ ವರ್ಧಕ- ರೋಗ ನಿರೋಧಕ ಶಕ್ತಿ* ಯುಳ್ಳ ಆಯುರ್ವೇದಿಕ್ ಔಷಧೀಯ ಕಿಟ್ಟುಗಳನ್ನು ಉಚಿತವಾಗಿ ನೀಡುವ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಖ್ಯಾತ ಆಯುರ್ವೇದ *ಡಾಕ್ಟರ್ ಶ್ರೀ ಗಿರಿಧರ್ ಕಜೆ* ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಕ್ಷಾ ಪಡೆಯ ಅಧ್ಯಕ್ಷರಾದ ಮಾನ್ಯ ಸಚಿವರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ *ಶ್ರೀ ಕೆ.ಎಸ್. ಈಶ್ವರಪ್ಪ* ನವರು ವಹಿಸಿದ್ದರು.ಸುರಕ್ಷಾ ಪಡೆಯ ಉಪಾಧ್ಯಕ್ಷರು ಮಾನ್ಯ ಶಾಸಕರು ವಿಧಾನಪರಿಷತ್ ಶ್ರೀ *ಆಯನೂರು ಮಂಜುನಾಥ್,* ಶಾಸಕರು ವಿಧಾನಪರಿಷತ್ *ಶ್ರೀ ಆರ್. ಪ್ರಸನ್ನ ಕುಮಾರ್,* ಎಂಎಡಿಬಿ ಅಧ್ಯಕ್ಷರಾದ *ಶ್ರೀ ಗುರುಮೂರ್ತಿ,* ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ *ಶ್ರೀ ಡಿ.ಎಸ್. ಅರುಣ್* , ಆರ್ .ಎಸ್.ಎಸ್ ಪ್ರಮುಖರಾದ *ಶ್ರೀ ಪಟ್ಟಾಭಿರಾಮ,* ಮಹಾನಗರ ಪಾಲಿಕೆ ಮಹಾಪೌರರಾದ *ಶ್ರೀಮತಿ ಸುವರ್ಣ ಶಂಕರ್* ಉಪ ಮಹಾಪೌರರಾದ *ಶ್ರೀಮತಿ ಸುರೇಖಾ ಮುರಳೀಧರ್,* ಜಿಲ್ಲಾ ಪಂಚಾಯಿತಿ ಸದಸ್ಯರಾದ *ಶ್ರೀ ಕೆ.ಇ. ಕಾಂತೇಶ್* ಅವರು ಹಾಜರಿದ್ದು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು.ನಗರದ ಪ್ರತಿಯೊಂದು ಕುಟುಂಬಗಳಿಗೂ ಈ ಆಯುರ್ವೇದ ಕಿಟ್ಟು ನೀಡುವ ಸಲುವಾಗಿ ಸುರಕ್ಷಾ ಪಡೆಯ ಎಲ್ಲ ಸದಸ್ಯರು ಹಾಜರಿದ್ದರು.