ರಾಷ್ಟ್ರೀಯ
ಲ್ಯಾಂಡ್ ಆಗುವ ವೇಳೆ 174 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅವಘಡ..!

ದುಬೈ–ಕೋಯಿಕ್ಕೋಡ್ ಹಾರುವ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ (ಐಎಕ್ಸ್–1344) ಕೇರಳದ ಕೋಯಿಕ್ಕೋಡ್ನ ಕರಿಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ ಅವಘಡಕ್ಕೀಡಾಗಿದೆ.
ರಾತ್ರಿ 7.45ರಲ್ಲಿ ಅಪಘಾತ ಸಂಭವಿಸಿದೆ ಎಂದು ಕೊಂಡೋಟ್ಟಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅವಘಢಕ್ಕೀಡಾದ ವಿಮಾನದಲ್ಲಿ 174 ಪ್ರಯಾಣಿಕರು, 6 ಮಂದಿ ಸಿಬ್ಬಂದಿ ಇದ್ದರೆನ್ನಲಾಗಿದೆ.ಅವರುಗಳಲ್ಲಿ ಇಬ್ಬರು ಪ್ರಯಾಣಿಕರು , ಪೈಲಟ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ .