
ಕಾಮಧೇನು ಗೋ ಸೇವಾ ಬಳಗ ಮತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ “ಗೋವಿಗಾಗಿ ಮೇವು” ಅಭಿಯಾನದಲ್ಲಿ ಜೆಸಿಐ ಕೋಟ ಬ್ರಿಗೇಡಿಯರ್ ನೇತೃತ್ವದಲ್ಲಿ ಕಲಾಚಿಗುರು ತಂಡದವರಿಂದ ಗೋವಿಗೆ ಹಸಿ ಹುಲ್ಲು & ಗೋವಿನ ಆಹಾರಗಳನ್ನು ನೀಲಾವರ ಗೋಶಾಲೆಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು, ಅಭಿಯಾನದ ರೂವಾರಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ,
ಜೇಸಿಐ ಕೋಟ ಬ್ರೀಗೇಡಿಯರ್ ನ ಅಧ್ಯಕ್ಷ ಜೇಸಿ ಪ್ರದೀಪ್ ಶೆಟ್ಟಿ ,ಕಾರ್ಯದರ್ಶಿ ಪ್ರದೀಪ್ ಪೂಜಾರಿ, ಶೇಷಗಿರಿ ನಾಯಕ್, ಚೈತ್ರ ಕೋಟ, ವಿಘ್ನೇಶ್ ಕೋಟ, ಮಹೇಂದ್ರ, ಗಣೇಶ, ನಾಗೇಶ್, ಮನೋಜ್, ಜಿ. ಕೆ. ಫ್ರೆಂಡ್ಸ್ ಉಪ್ಲಾಡಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.