
ಕುಂದಾಪುರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಜಪ್ತಿಗ್ರಾಮದ ಇಂಬಾಳಿಯ ಕೃಷ್ಣಯ್ಯ ಶೆಟ್ಟಿ ಎಂಬುವವರಿಗೆ ಸೇರಿದ ಶೆಡ್ಡಿನಲ್ಲಿ ಗಾಂಜಾ ಮಾರಾಟದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ತಾಲೂಕು ದಂಡಾಧಿಕಾರಿಯವರು ಹಾಗೂ ಸಿಬ್ಬಂದಿಯವರೊಂದಿಗೆ ಸುಮಾರು 10:50 ಗಂಟೆಗೆ ದಾಳಿ ನಡೆಸಿ ಆರೋಪಿತರಾದ ಕರಾಣಿ ಮಹಮ್ಮದ್ ನದೀಮ್ ಹಾಗೂ ಬೆಟ್ಟಿ ಮಹಮ್ಮದ್ ಅಫ್ಜಲ್ ರನ್ನು ಬಂಧಿಸಿದ್ದಾರೆ ಈ ಸಂಧರ್ಭದಲ್ಲಿ ಸ್ಥಳದಲ್ಲಿದ್ದ ಇನ್ನೊಬ್ಬ ಆರೋಪಿಯಾದ ರಯಾನ ಎನ್ನುವವ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುತ್ತಾನೆ.ಬಂಧಿತ ಅರೋಪಿಗಳಿಂದ ಸುಮಾರು ಎಂಟು ಸಾವಿರ ಮೌಲ್ಯದ ಮೂನ್ನರ ಅರವತ್ತು ಗ್ರಾಮ್ ಗಾಂಜ ವಶ ಪಡಿಸಿಕೊಳ್ಳಲಾಗಿದ್ದು ,ಮಾರಾಟಕ್ಕೆ ಬಳಸಲಾಗಿದ್ದ ಎರಡು ಸ್ಕೂಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.