ಕರಾವಳಿ

ಅನಿಶಾ ಪೂಜಾರಿಯ ಪ್ರಕರಣದ ಆರೋಪಿ ಬಂಧನ ಆಗದಿದ್ದಲ್ಲಿ ಪ್ರತಿಭಟನೆ !

ಕುಂದಾಪುರ ಸೆ.1: ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾದ ಅನಿಶಾ ಪೂಜಾರಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಮಟ್ಟು ಆರೋಪಿ ಚೇತನ್ ಶೆಟ್ಟಿ ಬಂಧನಕ್ಕೆ ಒತ್ತಾಯಿಸುವ ಕುರಿತು ಬಿಲ್ಲವ ಸಮಾಜ ಭಾಂದವರ ಅಭಿಪ್ರಾಯ ಕ್ರೋಡೀಕರಿಸುವ ಸಲುವಾಗಿ ನಿನ್ನೆ ದಿನಾಂಕ 31-08-2020. ಸೋಮವಾರ ಸಂಜೆ 4.00ಗಂಟೆಗೆ ಸ್ಯಾಬರಕಟ್ಟೆ, ಕಾಜ್ರಳ್ಳಿಯಲ್ಲಿ ವಿವಿಧ ಬಿಲ್ಲವ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಮುಖಂಡರ ಸಭೆ ನಡೆಯಿತು.

ಸಭೆಯಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಸಂಘಟನೆ ಮತ್ತು ಮುಖಂಡರ ಅಭಿಪ್ರಾಯದ ಪ್ರಕಾರ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಎರಡು ದಿವಸದೊಳಗಾಗಿ ಚೇತನ್ ಶೆಟ್ಟಿಯ ಬಂಧನ ಆಗಬೇಕು ಮತ್ತು ಬಂಧನ ಆಗದಿದ್ದಲ್ಲಿ ಮುಂದಿನ ದಿನದಲ್ಲಿ ಎಲ್ಲಾ ಬಿಲ್ಲವ ಸಮಾಜ ಸಂಘಟನೆಗಳನ್ನು ಸೇರಿಸಿ ಪ್ರತಿಭಟನೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆ ಮುಗಿದ ನಂತರ ಬ್ರಹ್ಮಾವರದ ಪೊಲೀಸ್ ವೃತ್ತ ನಿರೀಕ್ಷರನ್ನು ಭೇಟಿ ಮಾಡಿ ಪ್ರಕರಣ ಬಗ್ಗೆ ಮಾಹಿತಿಯನ್ನು ಪಡೆದು ಶ್ರೀಘದಲ್ಲಿ ಆರೋಪಿಯನ್ನು ಬಂಧನ ಮಾಡಬೇಕೆಂದು ಅವರಲ್ಲಿ ಮನವಿ ಮಾಡಲಾಯಿತು.   ಮನವಿಗೆ ಸ್ಪಂದಿಸಿದ ಪೊಲೀಸ್ ನಿರೀಕ್ಷರು ಪ್ರಕರಣದ ಆರೋಪಿಯನ್ನು ಶ್ರೀಘದಲ್ಲಿ ಬಂಧನ ಮಾಡಿ ಸೂಕ್ತ ರೀತಿಯಲ್ಲಿ ತನಿಖೆ ಮಾಡುತ್ತೇನೆ ಎನ್ನುವ ಭರವಸೆಯನ್ನು ನೀಡಿರುತ್ತಾರೆ.

ಸಭೆಯಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಮತ್ತು ಪದಾಧಿಕಾರಿಗಳು,  ಉಡುಪಿ ಜಿಲ್ಲಾ ಪರಿಷತ್ ಅಧ್ಯಕ್ಷರಾದ ನವೀನ್ ಶಂಕರಪುರ ಮತ್ತು ಪದಾಧಿಕಾರಿಗಳು,  ಯಡ್ತಾಡಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಗೀತಾ ಪೂಜಾರಿ ಮತ್ತು ಪದಾಧಿಕಾರಿಗಳು,  ಸಮಾಜದ ಮುಖಂಡರುಗಳಾದ ಶೇಖರ್ ಕರ್ಕೇರ, ಸಂಕಪ್ಪ ಎ. ವಕೀಲರು,  ಶಂಕರ್ ಶಾಂತಿ ಬಾರ್ಕುರು,  ಶೇಖರ್ ಪೂಜಾರಿ ಹಂದಟ್ಟು,  ಕೃಷ್ಣ ಪೂಜಾರಿ ಕುಂದಾಪುರ, ಮದನ್ ಪೂಜಾರಿ ಶೇಡಿಮನೆ,  ಅನಿಶಾ ಪೂಜಾರಿ ಕುಂಟುಬಸ್ಥರು ಹಾಗೂ ಬಿಲ್ಲವ ಸಮಾಜದ ಮುಖಂಡರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!