
ಉಡುಪಿ ಸೆ.2 : ಮನೆಯಂಗಳದಲ್ಲಿ ಮೋದಿ ಸರಕಾರದ ಸವಲತ್ತುಗಳ ಕಾರ್ಯಕ್ರಮ ಕೊಡವೂರು ವಾರ್ಡಿನಲ್ಲಿ ಪ್ರತೀ ಭಾನುವಾರ ನಡೆಯುತ್ತಿದೆ,ಒಟ್ಟು 26 ಜನರು ಫಲಾನುಭವಿ ಗಳಾಗಿದ್ದರೆ.ಅದು ನಮ್ಮ ವಾರ್ಡಿನ ಕಾರ್ಯಕರ್ತರ ಪ್ರಯತ್ನಕ್ಕೆ ಸಿಕ್ಕ ಫಲ,ವಿದ್ಯಾಭ್ಯಾಸ ಮುಗಿದ ಯುವಕ – ಯುವತಿಯರಿಗೆ ಸರಿಯಾದ ಸಮಯದಲ್ಲಿ ಸ್ವಂತ ಕೆಲಸ ಅಥವಾ ಉದ್ಯೋಗ ಸಿಗಬೇಕು ಆವಾಗ ಮಾತ್ರ ಅವರು ತಮ್ಮ ಮನೆ ಮತ್ತು ಮನೆಯವರನ್ನು ಸುಖದಿಂದ ಮತ್ತು ಜವಾಬ್ಧಾರಿಯಿಂದ ನೋಡಿಕೊಳ್ಳುತ್ತಾರೆ ಮತ್ತು ಸಮಾಜದಲ್ಲಿ ಆಗುವ ತೊಂದರೆಗಳಿಗೆ ತಾನು ಮುಂದೆ ನಿಂತು ಅದಕ್ಕೆ ಉತ್ತರಿಸುವಂತವ ನಾಗುತ್ತಾನೆ. ಮುಂದೊಂದು ದಿನ ಅವನು ಸಮಾಜದ ಮಾರ್ಗದರ್ಶನ ಆಗುವ ಮುಖಾಂತರ ಜಾಗೃತಿ ಸಮಾಜ ನಿರ್ಮಾಣ ಮಾಡುತ್ತಾನೆ.
ಒಂದು ವೇಳೆ ವಿದ್ಯಾಭ್ಯಾಸ ಮುಗಿಸಿದ ಅವನಿಗೆ ಸರಿಯಾದ ಉದ್ಯೋಗ ಅಥವಾ ಸ್ವಂತ ಉದ್ಯೋಗ ಸಾಧ್ಯವಿಲ್ಲದಿದ್ದರೆ ಅವನು ಡ್ರಗ್ಸ್,ಮದ್ಯಗಳಂತಹ ದುಶ್ಚಟಕ್ಕೆ ಒಳಗಾಗುತ್ತಾನೆ. ತಂದೆ ತಾಯಿಗೆ ಮತ್ತು ಮನೆಗೆ ಹೊರೆ ಯಾಗುತ್ತಾನೆ. ಸಮಾಜದಲ್ಲಿ ದೊಡ್ಡ ಕಂಟಕವಾಗಿ ಬೆಳೆದು ಅವನಿಂದ ಸಮಾಜಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ಆಗುವ ಕಂಟಕಗಳನ್ನು ತಪ್ಪಿಸದಿದ್ದರೆ ನನಗೆ ಕೊಟ್ಟ ಜವಾಬ್ದಾರಿಯನ್ನು ನಾನು ಸರಿಯಾಗಿ ನಿರ್ವಹಣೆ ಮಾಡುವುದು ನನ್ನ ಕರ್ತವ್ಯ.
ಆದಕಾರಣ ಪ್ರತೀ ಭಾನುವಾರ 2 ಕಡೆ ಶ್ರಮದಾನ ಮತ್ತು ಇಂತಹ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ, ಇವತ್ತು 69ನೆಯ ಶ್ರಮದಾನ ಕೊಡವೂರುನಲ್ಲಿ ಕಾರ್ಯಕರ್ತರ ಮುಂದಾಳತ್ವ ದಲ್ಲಿ ನಡೆಯುತ್ತಿದೆ ಎಂದು ಕೆ ವಿಜಯ ಕೊಡವೂರು ತಿಳಿಸಿದರು. ಮತ್ತು ಭಾನುವಾರ ರಜೆ ದಿನದಲ್ಲಿ ಕೊಡವೂರು ವಾರ್ಡ್ ಗೆ ಬಂದು ಸರಕಾರದ ಎಲ್ಲಾ ಮಾಹಿತಿಗಳನ್ನು ಮನಸ್ಸಿಗೆ ಮುಟ್ಟುವಂತೆ ತಿಳಿಸಿದ ಹಿಂದುಳಿದ ವರ್ಗದ ಜಿಲ್ಲಾ ಅಧಿಕಾರಿಯಾದ ಶ್ರೀ ದಯಾನಂದ್ ಪಿ ಇವರನ್ನು ಊರಿನ ಪರವಾಗಿ ಗೌರವಿಸಲಾಯಿತು.
ಕೊಡವೂರು ವಾರ್ಡಿನಲ್ಲಿ ಜನರಿಗೆ ಬೇಕಾಗುವಂತಹ ಎಲ್ಲಾ ಕೆಲಸಗಳು ನಡೆಯುತ್ತಿವೆ ಎಲ್ಲಾ ಇಲಾಖೆಯ ಕಾರ್ಯಕ್ರಮಗಳನ್ನು, ಮತ್ತು ಸ್ವಂತ ಉದ್ಯೋಗ ಯುವಕರಿಗೆ ಮಾಡಲು ಧೈರ್ಯ ತುಂಬಿಸುತಿದ್ದೇವೆ. 6 ಕಾರ್ಯಕ್ರಮದಲ್ಲಿ 26 ಪಾಲಾನುಭವಿ ಮತ್ತು 30 ಜನರಿಗೆ ಕೆಲಸ ಕೊಡುವುದೆಂದರೆ ಅದು ವಿಜಯ್ ಕೊಡವೂರು ಅವರ ಭಗೀರಥ ಪ್ರಯತ್ನ ಎಂದು ಶ್ರೀ ದಯಾನಂದ್ ಪಿ ಹೇಳಿದರು. ಈ ರೀತಿ ಯೋಚನೆ ಮಾಡುವ ನಗರ ಸಭಾ ಸದಸ್ಯರು ಇದ್ದರೆ ಈ ವಾರ್ಡಿನಲ್ಲಿ ನಿರುದ್ಯೋಗಿಗಳು ಇರಲ್ಲ ಎಂದು ಹೇಳಿದರು.
ಹಿರಿಯರಾದ ಶ್ರೀ ಶ್ರೀನಿವಾಸ್ ಕಾರಂತ ಕೊಡವೂರು ಮತ್ತು ಅಲ್ಪ ಸಂಖ್ಯಾತ ಇಲಾಖೆಯ ಇನ್ನೋರ್ವ ಅಧಿಕಾರಿ ಅಜಯ್ ಉಪಸ್ಥಿತರಿದ್ದರು.
ವಾರ್ಡ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಭಾತ್ ಕೊಡವೂರು ಕಾರ್ಯಕ್ರಮವನ್ನು ನಿರೂಪಿಸಿದರು.
ಬಂದ ಅಧಿಕಾರಿ ಮತ್ತು ಯುವಕ – ಯುವತಿಯರಿಗೆ ಮತ್ತು ಪ್ರತಿ ಕಾರ್ಯಕ್ರಮವನ್ನು ಉಚಿತವಾಗಿ ನೀಡುವ ಬ್ರಾಹ್ಮಣ-ಸಮಾಜ ಕೊಡವೂರು ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿರು.