ಕರಾವಳಿ
ದಲಿತ ಯುವಕನ ಮೇಲೆ ದೌರ್ಜನ್ಯ; ಬಿಗ್ ಬಾಸ್ ಸ್ಪರ್ಧಿ ಆರೆಸ್ಟ್

ಉಡುಪಿ : ದಲಿತ ಯುವಕನ ಮೇಲೆ ದೌರ್ಜನ್ಯ ಎಸಗಿದ ಹಿನ್ನಲೆಯಲ್ಲಿ ತೆಲುಗು ಬಿಗ್ ಬಾಸ್ ಸ್ಪರ್ಧಿ, ಸಿನಿಮಾ ನಿರ್ಮಾಪಕ ನೂತನ್ ನಾಯ್ಡುವನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ನೂತನ್ ನಾಯ್ಡು ತನ್ನ ಮನೆಯಲ್ಲಿ ಕೆಲಸಮಾಡಿಕೊಂಡಿದ್ದ 20 ವರ್ಷದ ದಲಿತ ಯುವಕ ಶ್ರೀಕಾಂತ್ ಮೇಲೆ ದೌರ್ಜನ್ಯ ಎಸಗಿ ತಲೆ ಬೋಳಿಸಿದ್ದಾನೆ. ಈ ಪ್ರಕರಣದಲ್ಲಿ 7 ಮಂದಿ ಸೇರಿಕೊಂಡಿದ್ದರು ಎನ್ನಲಾಗಿದೆ.