
ಉಳ್ಳಾಲ, ಸೆ.11: ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಕೃತಕ ನೆರೆ ಆವರಿಸಿದ್ದು, ಹಲವು ಮನೆಗಳು ಜಲಾವೃತವಾಗಿದೆ. ಯಾವುದೇ ಹಾನಿಯಾದ ಬಗೆ ವರದಿಯಾಗಿಲ್ಲ.
ಅಕ್ಕರೆಕೆರೆ, ಉಳ್ಳಾಲ ಬೈಲ್, ಪಟೇಲ್ ಕಾಂಪೌಂಡ್, ಸುಂದರಿ ಬಾಗ್, ಮಾಸ್ತಿಕಟ್ಟೆ ಮುಂತಾದ ಕಡೆ ಸುಮಾರು 30ಕ್ಕೂ ಅಧಿಕ ಮನೆಗಳಿಗೆ ನೆರೆ ನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಮನೆಗಳ ಅಡುಗೆ ಕೋಣೆಗಳಿಗೂ ನೀರು ನುಗ್ಗಿರುವುದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ನಗರಸಭಾ ಪೌರಾಯುಕ್ತ ರಾಯಪ್ಪ, ಗ್ರಾಮಕರಣಿಕ ಪ್ರಮೋದ್, ಸಹಾಯಕ ನವನೀತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.