ರಾಷ್ಟ್ರೀಯ

ರಾಜ್ಯ ರಾಷ್ಟ್ರೀಯ ಕೊರೋನಾ ಪರೀಕ್ಷೆ ವೇಳೆ ನೆಗೆಟಿವ್ ಬಂದಿರುವವರನ್ನು ಆ್ಯಂಟಿಜೆನ್ ಪರೀಕ್ಷೆಗೊಳಪಡಿಸಿ ರಾಜ್ಯಗಳಿಗೆ ಕೇಂದ್ರ ಸೂಚನೆ

ನವದೆಹಲಿ,ಸೆ.10 : ಮಹಾಮಾರಿ ಕೊರೋನಾ ಭೀತಿಯಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಲೇ ಇದೇ. ಇನ್ನು ಕೊರೋನಾ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದ ನಂತರ ಎರಡು ಮೂರು ದಿನಗಳಲ್ಲಿ ಮತ್ತೆ ರೋಗಲಕ್ಷಣಗಳು ಕಂಡುಬರುತ್ತಿವೆ ಈ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯೂ ಕೊರೋನಾ ಸೋಂಕು ಲಕ್ಷಣಗಳಿದ್ದರೂ ಕೂಡ ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿರುವವರನ್ನು ಮತ್ತೆ ಆ್ಯಂಟಿಜೆನ್ ಪರೀಕ್ಷೆಗೊಳಪಡಿಸಿ ಎಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ರಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮತ್ತು ಆರ್ಟಿಪಿಸಿಆರ್ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದ ಎರಡು ಮೂರು ದಿನಗಳಲ್ಲಿ ರೋಗಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ಕೊರೋನಾ ಸೋಂಕು ಲಕ್ಷಣಗಳಿದ್ದೂ ಕೂಡ ಆರ್ಟಿಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿರುವವರನ್ನು ಮತ್ತೆ ಆ್ಯಂಟಿಜೆನ್ ಪರೀಕ್ಷೆಗೊಳಪಡಿಸಿ. ಯಾವುದೇ ಕಾರಣಕ್ಕೂ ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆಯದೇ ಸಮಾಜದಲ್ಲಿ ತಿರುಗುವಂತಿಲ್ಲ. ಆತನಿಂದ ಇತರರಿಗೆ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರ್ತವ್ಯವಾಗಿದೆ. ಸೋಂಕು ತಡೆಯುವ ಈ ಕಾರ್ಯದಲ್ಲಿ ಯಾರನ್ನೂ ಕೂಡ ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದೆ.

ಐಸಿಎಂಆರ್ ಮಾರ್ಗದರ್ಶನದಂತೆ ಕೆಲವು ದೊಡ್ಡ ರಾಜ್ಯಗಳಲ್ಲಿ, ರಾಪಿಡ್ ಆಂಟಿಜೆನ್ ಟೆಸ್ಟ್ (ರಾಟ್) ಪರೀಕ್ಷೆ ನಡೆಯುತ್ತಿಲ್ಲ. ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮತ್ತು ಆರ್ಟಿಪಿಸಿಆರ್ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದ ಎರಡು ಮೂರು ದಿನಗಳಲ್ಲಿ ರೋಗಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ರೋಗ ಲಕ್ಷಣಗಳು ಇರುವವರು ಕೂಡ ಮತ್ತೆ ಆ್ಯಂಟಿಜೆನ್ ಪರೀಕ್ಷೆಗೊಳಪಡಬೇಕು ಎಂದೂ ಆರೋಗ್ಯ ಇಲಾಖೆ ಹೇಳಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!