ರಾಜ್ಯ

ರಾಗಿಣಿಗೆ ಮತ್ತೊಂದು ‘ಸಂಕಷ್ಟ’, ‘ಯೂರಿನ್‌’ ಬದಲು ‘ನೀರು ಕೊಟ್ಟು’ ಡ್ರಗ್ಸ್‌ ತನಿಖೆ ದಾರಿ ತಪ್ಪಿಸಲು ಸ್ಕೇಚ್‌…!?

ಬೆಂಗಳೂರು: ನಟಿ ರಾಗಿಣಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಪೊಲೀಸರ ತನಿಖೆಗೆ ಸಹಕಾರ ನೀಡುವ ಬದಲು, ತನಿಖೆಯ ದಿಕ್ಕನ್ನು ತಪ್ಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ನ್ಯಾಯಾಲಯದ ಅನುಮತಿ ಮೇರೆಗೆ ನಟಿ ರಾಗಿಣಿ ಹಾಗೂ ಸಂಜನಾಳನ್ನು ವರಕ್ತ, ಮೂತ್ರ ಹಾಗೂ ತಲೆ ಕೂದಲು ಪರೀಕ್ಷೆ ನಡೆಸಲು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆಯಲ್ಲಿ ನಟಿ ರಾಗಿಣಿ ತಮ್ಮ ಮೂತ್ರದ ಬದಲು ನೀರನ್ನು ತುಂಬಿಕೊಟ್ಟಿದ್ದಾರೆ ಎನ್ನಲಾಗಿದೆ. ಡ್ರಗ್ಸ್‌ ಸೇವನೆಗೆ ಸಂಬಂಧಪಟ್ಟಂತೆ ನಟಿ ರಾಗಿಣಿ ತನಿಖೆಯ ಪ್ರಾರಂಭಿಕ ಹಂತದಲ್ಲಿ ಪೋಲಿಸರ ಮುಂದೆ ತಾವು ಡ್ರಗ್ಸ್‌ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇವಲ್ಲದರ ನಡುವೆ ತನಿಖೆಗೆ ಅವಶ್ಯಕವಾಗಿರುವ ಕಾರಣಕ್ಕೆ ನ್ಯಾಯಾಲಯದ ಅನುಮತಿ ಮೇರೆಗೆ ರಾಗಿಣಿ ಹಾಗೂ ಸಂಜನಾರನ್ನು ಪೊಲೀಸರು ಆಸ್ಪತ್ರೆಗೆ ವೈದ್ಯಕೀಯ ತಪಾಸಣೆ ಕರೆದುಕೊಂಡು ಹೋಗಿದ್ದ ವೇಳೆಯಲ್ಲಿ ರಾಗಿಣಿ ತಮ್ಮ ಮೂತ್ರದ ಬದಲು, ನೀರನ್ನು ತುಂಬಿಕೊಟ್ಟಿರರುವ ಮಹತ್ವದ ಮಾಹಿತಿ ಸಿಕ್ಕಿದ್ದು, ಇದು ನಟಿ ರಾಗಿಣಿ ಇನ್ನೂ ಸಂಕಷ್ಟ ತರಲಿದ್ದು, ರಾಗಿಣಿ ಉದ್ದೇಶ ಪೂರ್ವಕ ವಾಗಿ ತನಿಖೆ ಹಾದಿ ತಪ್ಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನೂ ಇದೇ ವೇಳೆ ರಾಗಿಣಿ ಪೊಲೀಸರ ಜೊತೆಗೆ ನಡೆಸಿರುವ ವಾಗ್ವಾದ ವಿಡಿಯೊವೊಂದು ಕೂಡ ವೈರಲ್‌ ಆಗಿದ್ದು, ವಿಡಿಯೋದಲ್ಲಿ ‘ನನ್ನ ಜೀವನ ಈಗಾಗಲೇ ಹಾಳಾಗಿದೆ. ಈಗ ಪರೀಕ್ಷೆಯಲ್ಲಿ ಸಿಕ್ಕಾಕೊಂಡ್ರೆ ಜೈಲಿಗೆ ಹೋಗಬೇಕಾಗುತ್ತದೆ. ಯಾವುದೇ ಪರೀಕ್ಷೆ ಮಾಡುವುದಿದ್ದರೂ ನಮ್ಮ ವಕೀಲರ ಗಮನಕ್ಕೆ ತಂದು ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ನಿಮ್ಮೊಂದಿಗೆ ಮಾತನಾಡುತ್ತಿದ್ದು, ತನಿಖೆಗೆ ಸಹಕರಿಸಿ, ಈ ರೀತಿ ಮಾಡುವುದು ಕಾನೂನಿನ ವಿರುದ್ದ ಅಂತ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಇನ್ನೂ ರಾಗಿಣಿ ತಾವು ಯೂರಿನ್‌ ಬದಲು ನೀರು ಕೊಟ್ಟಿರುವುದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ ಇನ್ನು ಯಾವುದೇ ವ್ಯಕ್ತಿ ಮಾದಕ ದ್ರವ್ಯಗಳನ್ನು ಸೇವನೆ ಮಾಡಿದ ಒಂದು ವರುಶಗಳ ಕಾಲ ಕೂಡ ಆ ವ್ಯಕ್ತಿಗಳ ಕೂದಲು, ರಕ್ತ, ಹಾಗೂ ಮೂತ್ರದಲ್ಲಿ ಅಂಶ ಉಳಿದಿರುತ್ತದೆ ಎನ್ನಲಾಗಿದ್ದು, ಈನಿಟ್ಟಿನಲ್ಲಿ ಸಿಸಿಬಿ ಪೊಲೀಸರು ನಟಿಯರ ರಕ್ತ,ಮೂತ್ರ ಹಾಗೂ ಕೂದಲಿನ ಟೆಸ್ಟ್‌ ಮಾಡಿಸಲು ಮುಂದಾಗಿದ್ದಾರೆ. ಅಂದ ಹಾಗೇ ಒಂದು ವೇಳೆ ತಾವು ಡ್ರಗ್ಸ್‌ ಸೇವನೆ ಮಾಡಿರೋದು ಈ ಮೂಲಕ ತಿಳಿದು ಬಂದರೇ ನಮ್ಮ ಜೀವನವೇ ಹಾಳಾಗುತ್ತದೆ ಅಂತ ಇಬ್ಬರು ನಟಿಯರು ಹೆದರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!