ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಕರ್ನಾಟಕ ಸರ್ಕಾರಕ್ಕೆ ಆಂಧ್ರಪ್ರದೇಶ ಮಾದರಿಯಾಗಲಿ: ಪ್ರವೀಣ್ .ಎಮ್. ಪೂಜಾರಿ
ಉಡುಪಿ ಸೆ. 13: ಇಚ್ಚಾಶಕ್ತಿಯ ರಾಜಕೀಯ ನಿಲುವುಗಳಲ್ಲಿ ಮಾತ್ರ ಇಂತಹದ್ದು ಸಾಧ್ಯ ಅನ್ನುವುದನ್ನು ವೈ. ಎಸ್. ಜಗನ್ ಮೋಹನ್ ರೆಡ್ಡಿಯವರು ಆಂಧ್ರ ಪ್ರದೇಶದಲ್ಲಿ ಈಡಿಗ ಗೌಡ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಲು ಆದೇಶ ನೀಡುವ ಮೂಲಕ ಸಾಭೀತು ಪಡಿಸಿದ್ದಾರೆ.
ಈ ದೇಶದಲ್ಲಿಯೆ ಅವಿಸ್ಮರಣೀಯವಾಗಿ ಉಳಿಯುವಂತೆ ಕಳೆದ ಸಾಲಿನಲ್ಲಿ ಐವತ್ತು ಸಾವಿರದಷ್ಟು ಸಮಸ್ತ ಸಮಾಜಬಾಂಧವರು ಏಕ ಉದ್ದೇಶದಿಂದ ಒಗ್ಗೂಡಿ “ಬಿಲ್ಲವ ಮಹಾ ಸಮಾವೇಶ” ದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಎನ್ನುವ ಪರಿಕಲ್ಪನೆಯ ಮನವಿಯನ್ನು ಪ್ರಪ್ರಥಮ ಬಾರಿ ನೀಡಲಾಗಿತ್ತು. ಈವರೆಗೆ ಬೇರೆ ಬೇರೆ ಸಮಾಜಕ್ಕೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದ್ದು, ಇದಕ್ಕೆ ಯಾವುದೇ ವಿರೋಧವಿಲ್ಲ ಸಂತಸವೇ. ಆದರೆ ಈ ಸಮಾವೇಶದ ಪ್ರಭಾವದಿಂದಾಗಿ ಆಂಧ್ರಪ್ರದೇಶ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿರುವುದನ್ನು ಮೆಚ್ಚುವಂತದ್ದು.
ಹಿಂದುಳಿದ ಸಮುದಾಯವಾಗಿ ರಾಜ್ಯಾದ್ಯಂತ ಬಹಳ ದೊಡ್ಡ ಸಂಖ್ಯೆಯಲ್ಲಿದ್ದು ರಾಜಕೀಯ ನಿರ್ಣಾಯಕರಾಗಿರುವ ನಾವು ಪ್ರತಿ ಭಾರಿಯೂ ಮನವಿ ಮತ್ತು ಆಶ್ವಾಸನೆಗಷ್ಟೆ ಸೀಮಿತ ರಾಗುತ್ತಿದ್ದೇವೆ. ಸಂಘಟನಾತ್ಮಕ ಭೇದ ಭಾವಗಳನ್ನು ಮರೆತು ಸಮಾಜಕ್ಕೋಸ್ಕರ ನೀಡಿರುವ ಮನವಿಯನ್ನು ಪಕ್ಷಭೇದವಿಲ್ಲದೆ ಸರ್ಕಾರಗಳು ಪರಿಗಣಿಸುವುದು ಅತ್ಯಂತ ಅಗತ್ಯ. ಇನ್ನಾದರೂ ಬೃಹತ್ ಬಿಲ್ಲವ ಸಮುದಾಯಕೆಜೆ ಆಗುತ್ತಿರುವ ಅನ್ಯಾಯ ಅವಮಾನವನ್ನು ಖಂಡಿಸುತ್ತಾ, ಮುಂದಿನ ದಿನಗಳಲ್ಲಿ ಕರ್ನಾಟಕ ಘನ ಸರ್ಕಾರವು ಪಕ್ಷಾತೀತವಾಗಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ದಿಟ್ಟ ಕ್ರಮ ಕೈಗೊಳ್ಳುವಂತಾಗಲಿ ಎಂದು ಪ್ರವೀಣ್ ಎಮ್. ಪೂಜಾರಿ, ಜಿಲ್ಲಾಧ್ಯಕ್ಷರು ಉಡುಪಿ, ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ), ಉಡುಪಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.