ಸೆಪ್ಟೆಂಬರ್ 25ರಿಂದ ಮತ್ತೆ ಲೌಕ್ಡೌನಾ ?!
ನವದೆಹಲಿ: ದೇಶಾದ್ಯಂತ ಕರೊನಾ ವೈರಸ್ ಕೇಸ್ಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವ ಕಾರಣ ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ ಸೆಪ್ಟೆಂಬರ್ 25ರಿಂದ ಮತ್ತೊಮ್ಮೆ ಲಾಕ್ಡೌನ್ ಘೋಷಿಸಲಿದೆ. ಹೀಗೊಂದು ಒಕ್ಕಣೆ ಇರುವಂಥ ಆದೇಶ ಪ್ರತಿಯೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ನಿಜವಾಗಿಯೂ ಸೆಪ್ಟೆಂಬರ್ 25ರಿಂದ ಮತ್ತೆ ಲೌಕ್ಡೌನಾ! ಎಂದು ಅನೇಕರು ಉದ್ಗರಿಸಿದ್ದರು. ಈ ಬಗ್ಗೆ ಚಿಂತೆ ಬೇಡ.
ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದ ಆದೇಶ ಪ್ರತಿ, ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಥಾರಿಟಿ (ಎನ್ಡಿಎಂಎ) ಹೆಸರಿನ ಲೆಟರ್ಹೆಡ್ನಲ್ಲಿತ್ತು. ಅಲ್ಲದೆ, ಸೆಪ್ಟೆಂಬರ್ 25ರಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಅನ್ನು ಮತ್ತೊಮ್ಮೆ ವಿಧಿಸುವುದನ್ನು ಜಾರಿಗೊಳಿಸಲು ತನಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂಬ ವಿವರಣೆ ಅದರಲ್ಲಿತ್ತು.
ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್ ಪ್ರಕಾರ, ಎನ್ಡಿಎಂಎ ಅಂಥದ್ದೊಂದು ಆದೇಶವನ್ನೇ ಪ್ರಕಟಿಸಿಲ್ಲ. ಅದು ನಕಲಿ ಆದೇಶ ಪ್ರತಿ. ಇದು ಸುಳ್ಳು ಸುದ್ದಿ . ಈ ಬಗ್ಗೆ ಸೋಮವಾರ ರಾತ್ರಿ ಸ್ಪಷ್ಟೀಕರಣ ನೀಡಿರುವ ಪಿಐಬಿ, ಅದೊಂದು ನಕಲಿ ಆದೇಶ ಪ್ರತಿ ಎಂದು ಸ್ಪಷ್ಟಪಡಿಸಿದೆ.