ರಾಜ್ಯ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪ : ಸಿಸಿಬಿ ಕಚೇರಿಗೆ ದಿಗಂತ್-ಐಂದ್ರಿತಾ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪದಲ್ಲಿ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಐಂದ್ರಿತಾ ಹಾಗೂ ದಿಗಂತ್ ವಿಚಾರಣೆಗೆ ಹಾಜರಾಗಿದ್ದಾರೆ.

ನಟಿ ರಾಗಿಣಿ , ಸಂಜನಾ ಬಳಿಕ ಇದೀಗ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ ಗೆ ಸಂಕಷ್ಟ ಎದುರಾಗಿದೆ. ಪಾರ್ಟಿಯಲ್ಲಿ ನಟಿ ರಾಗಿಣಿ, ಸಂಜನಾ ಜೊತೆ ಐಂದ್ರಿತಾ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿರೇನ್ ಖನ್ನಾ ಹೇಳಿಕೆ ಯಲ್ಲೂ ಐಂದ್ರಿತಾ ರೈ ಹೆಸರು ಕೇಳಿಬಂದಿದ್ದು, ಈ ಹಿನ್ನೆಲೆ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ ಗೆ ನೋಟಿಸ್ ಜಾರಿ ಮಾಡಿದ್ದು, ಇಂದು ಸ್ಟಾರ್ ದಂಪತಿ 11 ಗಂಟೆಗೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!