ಉಡುಪಿಯ ‘ರಾಯಲ್ ಮಹಲ್’ ಬಹುಮಹಡಿ ಕಟ್ಟಡದ ಪಾರ್ಶ್ವ ಭಾಗ ಕುಸಿತ: ತಪ್ಪಿದ ಭಾರೀ ದುರಂತ

ಉಡುಪಿ, ಸೆ.17: ನಗರದ ಹೃದಯ ಭಾಗದಲ್ಲಿರುವ, ಚಿತ್ತರಂಜನ್ ಸರ್ಕಲ್ ನಲ್ಲಿರುವ ಹಳೆಯ ಬಹು ಮಹಡಿ ಕಟ್ಟಡ ರಾಯಲ್ ಮಹಲ್ ವಸತಿ ಗೃಹ ಕುಸಿದು ಬಿದ್ದಿದು ಪವಾಡ ಸದೃಶವಾಗಿ ಕಟ್ಟದಲ್ಲಿರುವವರು ಪಾರಾಗಿದ್ದಾರೆ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಮಹಿಳೆಯೋರ್ವರು ಗಾಯಗೊಂಡಿದ್ದಾರೆ.

ನಗರದ ಚಿತ್ತರಂಜನ್ ವೃತ್ತದಲ್ಲಿರುವ ರೋಯಲ್ ಮಹಲ್ ನೆಲ ಅಂತಸ್ತಿನಲ್ಲಿರುವ ಚಿಪ್ಸ್ ಅಂಗಡಿ ಸಂಪೂರ್ಣವಾಗಿ ನಷ್ಟ ಉಂಟಾಗಿದೆ ಹಾಗೂ ನೆಲ ಅಂತಸ್ತಿನಲ್ಲಿರುವ ಜನಾಔಷದ ಕೇಂದ್ರವು ಭಾಗಶ: ಕುಸಿದಿದೆ. 3 ದಿನದಿಂದ ಸುರಿದ ನಿರಂತರ ಮಳೆಯಿಂದ ಕುಸಿದಿದ್ದು ಇನ್ನಷ್ಟ್ಟು ಕುಸಿಯುವ ಹಂತದಲ್ಲಿದ್ದು, ಜನ ಆತಂಕಕ್ಕೆ ಈಡಾಗಿದ್ದಾರೆ.
ಅಗ್ನಿ ಶಾಮಕ ದಳ ಹಾಗೂ ನಗರ ಪೊಲೀಸ್ ಧಾವಿಸಿ ಸಂಚಾರ ಸುಗಮಗೊಳಿಸಿದರು. ಘಟನಾ ಸ್ಥಳಕ್ಕೆ ನಗರ ಸಭೆಯ ಕಮೀಷನರ್ ಆನಂದ್ ಕಲ್ಲೋಲಿಕರ್ ಭೇಟಿ ನೀಡಿದ್ದು, ಕಟ್ಟಡದ ಕಾಲು ಭಾಗದಷ್ಟು ಕುಸಿದಿದ್ದು, ಉಳಿದ ಭಾಗವೂ ಕುಸಿಯುವ ಸಾಧ್ಯತೆ ಇರುವುದರಿಂದ ತಕ್ಷಣ ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸುವಂತೆ ಮಾಲಕರಿಗೆ ಆಧೇಶಿಸಿದ್ದಾರೆ. ಇದೇ ರೀತಿ ನಗರದಲ್ಲಿ ಪಾಳು ಬಿದ್ದಿರುವ, ನಿರ್ವಹಣೆ ಇಲ್ಲದ ಕಟ್ಟಡ ಗಳಿದ್ದು, ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿ ಉಂಟಾಗುವ ಸಾಧ್ಯತೆ ಇರುವ ಕಟ್ಟಡಗಳನ್ನು ಒಂದು ತಿಂಗಳೊಳಗೆ ತೆರವುಗೊಳಿಸಲು ಆಧೇಶಿಸಿದ್ದಾರೆ