ಏರ್ಪೋಟ್ ನಲ್ಲಿ ಗನ್ ಹಿಡಿದು ಬಂದ ಆಸ್ನೋಟಿಕ್-ಪೊಲೀಸರ ವಶಕ್ಕೆ!?
ಬೆಂಗಳೂರು:- ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಬೆಂಗಳೂರಿನಿಂದ ಗೋವಾಕ್ಕೆ ತೆರಳಲು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳಿದ್ದ ವೇಳೆ ತಮ್ಮ ಬ್ಯಾಗ್ ನಲ್ಲಿ ಪಿಸ್ತೂಲ್ ಇಟ್ಟುಕೊಂಡಿದ್ದು ಈವೇಳೆ ತಪಾಸಣೆ ಮಾಡಿದ ವಿಮಾನ ನಿಲ್ದಾಣದ ಸಿಬ್ಬಂದಿಗಳು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನು ಈಬಗ್ಗೆ ತನಿಖೆ ನಡೆಸಿದ ಪೊಲೀಸರು ಮಾಹಿತಿ ಕೇಳಿದ್ದು ಗನ್ ಗೆ ಲೇಸೆಂಸ್ ಇದ್ದರೂ ಅದರ ಪತ್ರಗಳನ್ನು ಇಟ್ಟುಕೊಳ್ಳದೇ ಹಾಗೂ ಪೂರ್ವ ಮಾಹಿತಿ ನೀಡದೆ ತೆರಳಿದ್ದರು. ಹೀಗಾಗಿ ವಿಮಾನ ನಿಲ್ದಾಣದ ರಕ್ಷಣಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದರು.ಈಗ ಮೂಲ ದಾಖಲೆ ಪರಿಶೀಲನೆ ನಡೆಸಿದ್ದು ಮಾಜಿ ಸಚಿವ ಆಸ್ನೋಟಿಕರ್ ಬೆಂಗಳೂರಿನ ವಿಮಾನ ನಿಲ್ದಾದಲ್ಲಿ ಲಾಕ್ ಆಗಿದ್ದಾರೆ.
ಹಿಂದೆಯೋ ನಡೆದಿತ್ತು ಅಚಾತುರ್ಯ?
ಕಳೆದ ಎಂ.ಪಿ ಚುನಾವಣೆಯಲ್ಲಿ ಬೆಂಗಳೂರಿನಿಂದ ಮಾಜಿ ಸಚಿವ ಆಸ್ನೋಟಿಕರ್ ವಿಮಾನದ ಮೂಲಕ ಗೋವಾಕ್ಕೆ ಬಂದು ನಂತರ ಕಾರವಾರಕ್ಕೆ ಬಂದಿದ್ದರು. ಆದರೇ ತಮ್ಮ ವಾಹನದಲ್ಲೇ ತಮ್ಮ ಲೈಸೆನ್ಸ್ ಹೊಂದಿದ್ದ ಗನ್ ಅನ್ನು ಬಿಟ್ಟು ಬಂದಿದ್ದು ಅದನ್ನು ಕಾರುಚಾಲಕ ಬೆಂಗಳೂರಿನಿಂದ ಕಾರವಾರಕ್ಕೆ ಕಾರಿನಲ್ಲಿ ತರುವಾಗ ಕಾರಿನ ತಪಾಸಣೆಯನ್ನು ಹಾವೇರಿ ಹೆದ್ದಾರಿಯಲ್ಲಿ ಮಾಡುವಾಗ ವಶಕ್ಕೆ ಪಡೆದಿದ್ದರು.ಲೇಸೆಂಸ್ ಇದ್ದ ಗನ್ ಅನ್ನು ಯಾರ ಹೆಸರಿನಲ್ಲಿ ಇರುತ್ತದೋ ಅವರೇ ಗನ್ ತರಬೇಕು ಆದರೇ ಅವರ ಕಾರು ಚಾಲಕ ತಂದಿದ್ದರಿಂದ ಸಮಸ್ಯೆಯಾಗಿತ್ತು.ನಂತರ ಕೋರ್ಟ ನಲ್ಲಿ ಕೇಸ್ ಮುಕ್ತಾಯಗೊಂಡಿತ್ತು. ಇಂದು ಕೂಡ ಅವರು ಗನ್ ತಮ್ಮಬಳಿ ಇಟ್ಟುಕೊಂಡಿದ್ದು ಬೆಂಗಳೂರಿನ ಏರ್ ಪೋರ್ಟ ನಿಂದ ಗೋವಾ ಕ್ಕೆ ತೆರಳುವಾಗ ಈವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು ಇದರ ದಾಖಲೆ ಅವರ ಬಳಿ ಇರಲಿಲ್ಲ ಎನ್ನಲಾಗಿದೆ.ಆದರೇ ಅವರ ಗನ್ ಲೇಸೆಂಸ್ ಕಾರವಾರದಲ್ಲಿ ಕೆಲವೇ ತಿಂಗಳ ಹಿಂದೆ ಲೇಸೆಂಸ್ ರಿನೀವಲ್ ಮಾಡಿಸಿಕೊಂಡಿದ್ದಾರೆ.