
ಉಡುಪಿ: ಬೆಳ್ಳಗಿನ ಜಾವ ಬೈಕ್ ನಲ್ಲಿ ಬಂದ ದುಷ್ಕ್ರಮಿಗಳ ತಂಡವೊಂದು ಮಣಿಪಾಲ ಪ್ರೆಸ್ ಉದ್ಯೋಗಿಯೊರ್ವನಿಗೆ ಚಾಕುವಿನಿಂದ ಇರಿಯಲು ಯತ್ನಿಸಿ ಮೊಬೈಲ್ ಕಸಿದುಕೊಂಡು ದರೋಡೆಗೈದ ಘಟನೆ ಅಲೆವೂರು ಗುಡ್ಡೆಯಂಗಡಿ ಬಳಿ ಇಂದು ನಡೆದಿದೆ.
ಮಣಿಪಾಲ ಪ್ರೆಸ್ ನಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ಮುಗಿಸಿ ಬೆಳ್ಳಿಗೆ ಮನೆಗೆ ತೆರಳುತ್ತಿರುವಾಗ ಉದ್ಯಾವರ ನಿವಾಸಿಯೊರ್ವರು ಮುಂಜಾನೆ 5.15 ಸುಮಾರಿಗೆ ಅಲೆವೂರು ಗುಡ್ಡೆಯಂಗಡಿ ಬಳಿ ಹೋಗುತ್ತಿರುವ ಸಂದರ್ಭ ಎದುರಿನಿಂದ ಬೈಕ್ ನಲ್ಲಿ ಬಂದ ಇಬ್ಬರು ಸವಾರನನ್ನು ತಡೆದು ಬೆಲೆ ಬಾಳುವ ವಸ್ತು ನೀಡುವಂತೆ ಬೆದರಿಸಿದ್ದರು ಎನ್ನಲಾಗಿದೆ, ಮೊದಲು ನಿರಾಕರಿಸಿದಾಗ ದರೋಡೆಕೋರರು ಚೂರಿ ತೆಗೆದು ಯುವಕನ ಹೊಟ್ಟೆಗೆ ಇರಿಯಲು ಮುಂದಾಗಿದ್ದರು.
ಇದನ್ನರಿತ ಯುವಕ ತಕ್ಷಣ ಕೈಯಲ್ಲಿ ತಡೆದಿದ್ದ ಎನ್ನಲಾಗಿದೆ. ನಂತರ ಯುವಕ ಬೊಬ್ಬ ಹೊಡಿದಿದ್ದು ಇದರಿಂದ ಹೆದರಿದ ದರೋಡೆಕೋರರು ಯುವಕನ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಸ್ಥಳೀಯರು ಯುವಕನ ಬೊಬ್ಬೆ ಕೇಳಿ ಹೊರ ಬಂದಾಗ ದರೋಡೆಕೋರರು ಇತ ಕುಡಿದು ಬಿದ್ದಿದ್ದಾನೆಂದು ಹೇಳಿ ಸ್ಥಳದಿಂದ ಪರಾರಿಯಾದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಹಲವಾರು ಕಡೆ ಯುವಕರ ತಂಡ ದರೋಡೆ ಯತ್ನ ನಡೆಸಿದೆ ಎಂದು ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ಇಂದ್ರಾಳಿ ಪೆಟ್ರೋಲ್ ಪಂಪಿನಲ್ಲೂ ಯುವಕನೊಬ್ಬನ ಹಣ ದೋಚಲು ಪ್ರಯತ್ನಿಸಿದ್ದರೆ ಎನ್ನಲಾಗಿದೆ. ಉಡುಪಿ ಮುತ್ತು ಮಣಿಪಾಲ ಪೊಲೀಸರು ದರೋಡೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.