
ಪುರಾಣ ಪ್ರಸಿದ್ಧಿಯಾದ ಹಾಗೂ ಪ್ರವಾಸಿ ತಾಣ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಪುರುಷ ಭಕ್ತರು ಧೋತಿ ಅಥವಾ ಲುಂಗಿ ಧರಸಿರಬೇಕು. ದೇವಾಲಯ ಒಳ ಪ್ರವೇಶಿಸುವಾಗ ಶರ್ಟ್ (ಅಂಗಿ) ತೆಗೆಯಬೇಕು. ಪ್ಯಾಂಟ್, ಬರ್ಮುಡಾ, ಅರ್ಧ ಪ್ಯಾಂಟ್ ಧರಿಸುವಂತಿಲ್ಲ.ಮಹಿಳೆಯರು ಸೀರೆ, ಚೂಡಿದಾರ ಅಥವಾ ಲಂಗ, ಶಲ್ಯವನ್ನು ಧರಿಸಿರಬೇಕು. ಅರ್ಧ ಪ್ಯಾಂಟ್, ಬರ್ಮುಡಾ, ಸ್ಕರ್ಟ್ ಅನ್ನು ಧರಿಸಿ ಬಂದರೆ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.