
ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನ ಬಂಕೇರ್ಕಟ್ಟ ಆಚಾರಿಗುಂಡಿ ಪ್ರದೇಶಗಳ ಹಲವಾರು ಮನೆಯೊಳಗೆ ರಾತೋರಾತ್ರಿ ಅಕಾಲಿಕ ಮಳೆ ನೀರು ನುಗ್ಗಿದ್ದು ಸ್ಥಳೀಯ ಯುವಕರು ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಕಾರದೊಂದಿಗೆ ನೆರೆಯಲ್ಲಿ ಸಿಲುಕಿಕೊಂಡಿದ್ದ ನೂರಾರು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.

ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ(ರಿ.) ಇದರ ಶ್ರೀ ನಾರಾಯಣಗುರು ಸಮುದಾಯ ಭವನ ಹಾಗೂ ಬಂಕೇರ್ಕಟ್ಟ ಪರಿಸರದ ಮನೆಗಳಲ್ಲಿ ತಾತ್ಕಾಲಿಕ ತಂಗುವ ವ್ಯವಸ್ಥೆ ಮಾಡಲಾಗಿದೆ.