
ಪೂರ್ವ ಗೋದಾವರಿ: ಪುಲಸ ಎಂಬ ಸ್ಥಳೀಯವಾಗಿ ಜನಪ್ರಿಯವಾಗಿರುವ ಮೀನುಗಳ ರಾಜ ಹಿಲ್ಸಾ ಪೂರ್ವ ಗೋದಾವರಿಯ ಕೆಲವು ಭಾಗಗಳಲ್ಲಿ ಮಾರುಕಟ್ಟೆಗೆ ಬಂದಿದೆ, ಆದರೆ ಈ ಋತುವಿನಲ್ಲಿ ಇದು ಹೆಚ್ಚು ದುಬಾರಿಯಾಗಿದೆ. ಪುಲಸಾ ಮೀನುಗಳ ಹಿಡಿಯುವಿಕೆ ಈ ಪ್ರದೇಶದಲ್ಲಿ ಕಡಿಮೆಯಾಗುತ್ತಿರುವುದರಿಂದ ಬೆಲೆ ಗಗನಕ್ಕೇರಿದೆ.
ಅಂದ ಹಾಗೇ ಕೆಲವು ದಿನಗಳ ಹಿಂದೆ ಪೂರ್ವ ಗೋದಾವರಿ ಜಿಲ್ಲೆಯ ಮಮಿದಿಕುದೂರು ಮಂಡಲ್ ವ್ಯಾಪ್ತಿಯ ಪಸರ್ಲಪುಡಿ ಪ್ರದೇಶದಲ್ಲಿ ಸುಮಾರು 2.5 ಕೆಜಿ ಪುಲಾಸಾ ವನ್ನು 21 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಈ ವೇಳೇ ಸ್ಥಳೀಯ ರಾಜಕಾರಣಿ ಕೆ.ಕೊಂಡಾಲ ರಾವ್ ಅವರು ಹರಾಜಿನಲ್ಲಿ ಪುಲಸಾ ಮೀನು ಖರೀದಿಸಿದರು ಎನ್ನಲಾಗಿದೆ. ಅದೇ ರೀತಿ ಪೂರ್ವ ಗೋದಾವರಿ ಜಿಲ್ಲೆಯ ಯಾನಂ ಪ್ರದೇಶದಲ್ಲಿ 1.5 ಕೆಜಿ ಪುಲಾಸಾ ವನ್ನು 15,000 ರೂ.ಗೆ ಮಾರಾಟ ಮಾಡಲಾಗಿತ್ತು, ಇದು ಸಾಮಾನ್ಯವಾಗಿ ಪ್ರತಿ ಕೆಜಿಗೆ 3,000 ದಿಂದ 6,000 ರೂ.ಗಳವರೆಗೆ ಮಾರಾಟವಾಗುತ್ತದೆ. ಈ ಮಟ್ಟಿಗೆ ಹೆಚ್ಚಿನ ಬೆಲೆಯಲ್ಲಿ ಮೀನು ಮಾರಾಟವಾಗುವುದಕ್ಕೆ ಕಾರಣ ಗೋದಾವರಿ ನೀರಿನಲ್ಲಿ ರುಚಿರುಚಿಯಾದ ಮೀನುಗಳು ಕಡಿಮೆಯಾದ ಕಾರಣ, ಸೀಮಿತ ಪ್ರಮಾಣದ ಮೀನುಗಳನ್ನು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆಯಂತೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಗೋದಾವರಿ (ಪೂರ್ವ ಗೋದಾವರಿ ಜಿಲ್ಲೆ) ಮಾತ್ರ ಪುಲಸಾ ಲಭ್ಯಇರುವುದರಿಂದ ಈ ಮೀನು ಈ ಭಾಗದಲ್ಲಿ ಹೆಚ್ಚು ಪ್ರಿಯವಾಗಿದೆ. ಪ್ರವಾಹದ ಸಮಯದಲ್ಲಿ ಪುಲಸಾ ಸೇರಿದಂತೆ ಕೆಲವು ಸಮುದ್ರದ ಮೀನುಗಳು ಗೋದಾವರಿ ನದಿಗೆ ನುಗ್ಗಿ ಪ್ರವಾಹದ ವಿರುದ್ಧ ನೀರನ್ನು ಪ್ರವೇಶಿಸುತ್ತವೆ ಮತ್ತು ಕೆಲವೊಮ್ಮೆ ಸರ್ ಆರ್ಥರ್ ಕಾಟನ್ ಬ್ಯಾರೇಜ್ ನ ಗೇಟ್ ಗಳನ್ನು ಮೇಲೆತ್ತಿದಾಗ ಅವು ನದಿಯ ನೀರಿಗೆ ಧುಮುಕುತ್ತವೆ. ಈ ತಳಿಯ ಮೀನು ಗಳು ನದಿ ನೀರಿನಲ್ಲಿ ಸಿಕ್ಕಾಗ ಮಾತ್ರ ರುಚಿಯಾಗಿ ಯೇ ಇರುತ್ತದೆ ಅಂತ ಇಲ್ಲಿನ ಜನತೆ ಹೇಳುತ್ತಾರೆ. ಗೋದಾವರಿ ಪುಲಾಸ ಮೀನು ಅತ್ಯಂತ ರುಚಿಕರಮೀನುಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ ಇದರ ರುಚಿಯು ಬಹಳ ಕಾಲ ಬಾಯಲ್ಲಿ ನೀರೂರಿಸುವಂತೆ ಇರುತ್ತದೆ. ಇದು ದೇಶದ ಅತ್ಯಂತ ದುಬಾರಿ ಮೀನುಕೂಡ ಆಗಿದೆ.