ರಾಜ್ಯ

ಖ್ಯಾತ ನಿರೂಪಕಿ ಅನುಶ್ರೀಗೂ ಡ್ರಗ್ಸ್‌ ಮಾಫಿಯಾ ನಂಟು…? ವಾಟ್ಸಾಪ್‌ ಮೂಲಕ ಸಿಸಿಬಿ ಪೊಲೀಸರಿಂದ ನೋಟೀಸ್

ಬೆಂಗಳೂರು ಸೆ. 24 : ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದ್ದು, ಇದೀಗ ಕನ್ನಡದ ಇನ್ನೋರ್ವ ಖ್ಯಾತ ಸ್ಟಾರ್ ಆಂಕರ್ ಕಂ ನಟಿಗೂ ಕೂಡ ಡ್ರಗ್ಸ್ ಜಾಲದ ನಂಟಿದೆಯೇ ಎಂಬ ಅನುಮಾನ ಮೂಡಿದೆ. ಡ್ರಗ್ಸ್ ಪ್ರಕರಣದಲ್ಲಿ ಇದೀಗ ಆಂಕರ್ ಅನುಶ್ರೀ ಹೆಸರು ಕೇಳಿಬಂದಿದೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೀಡಾಗಿರುವ ಡಾನ್ಸರ್ ತರುಣ್ ಸಿಸಿಬಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದು, ಖ್ಯಾತ ಆಂಕರ್ ಕಂ ನಟಿ ಅನುಶ್ರೀ ಜೊತೆ ತನಗೆ ಆತ್ಮೀಯ ಸ್ನೇಹವಿರುವುದಾಗಿ ಹೇಳಿದ್ದಾನೆ. ಅಲ್ಲದೇ ತಾನು ಅನುಶ್ರೀ ಜೊತೆ ಕನ್ನಡದ ಹಲವು ಶೋಗಳಲ್ಲಿ ಭಾಗಿಯಾಗಿದ್ದಾಗಿಯೂ ತಿಳಿಸಿದ್ದಾನೆ.

ತರುಣ್ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಆಂಕರ್ ಅನುಶ್ರೀ ಅವರಿಗೆ ಡ್ರಗ್ಸ್ ಜಾಲದ ಲಿಂಕ್ ಇರುವ ಬಗ್ಗೆ ಸಿಸಿಬಿ ಸಾಕಷ್ಟು ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಮಂಗಳೂರು ಸಿಸಿಬಿ ಪೊಲೀಸರ ಒಂದು ತಂಡ ಬೆಂಗಳೂರಿಗೆ ಆಗಮಿಸಿದ್ದು, ಅನುಶ್ರೀ ಅವರ ಮನೆಗೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ಖುದ್ದು ನೋಟೀಸ್ ನೀಡಲಿದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!