
ಅಮೆರಿಕದ ಪ್ರಸಿದ್ಧ ಬಾಹ್ಯಾಕಾಶ ಸಂಸ್ಥೆ ನಾಸಾ 2024ರಲ್ಲಿ ಚಂದ್ರನಲ್ಲಿ ಮಾನವನನ್ನು ಇಳಿಸಲು ಮಾನವ ಸಹಿತ ಚಂದ್ರಯಾನದ ಗುರಿಯನ್ನು ಹಾಕಿಕೊಂಡಿದೆ. ಇದೇ ಮೊದಲ ಬಾರಿಗೆ ಚಂದ್ರನ ಅಂಗಳದಲ್ಲಿ ಮಹಿಳೆಯನ್ನು ಇಳಿಸಲು ನಾಸಾ ತಯಾರಿ ಮಾಡಿಕೊಳ್ಳುತ್ತಿದೆ. ಈ ಐತಿಹಾಸಿಕ ಯಾನದಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಗಗನಯಾತ್ರಿಗಳು ಇರಲಿದ್ದಾರಂತೆ. ಈ ಯೋಜನೆಗೆ ಬರೊಬ್ಬರಿ 28 ಶತಕೋಟಿ ಅಮೆರಿಕನ್ ಡಾಲರ್ ಹಣ ಖರ್ಚಾಗಲಿದೆ,ಇದರಲ್ಲಿ ಲ್ಯಾಂಡರ್ ನಿರ್ಮಾಣಕ್ಕೆ 16 ಶತಕೋಟಿ ಡಾಲರ್ ಹಣ ಖರ್ಚಾಗುತ್ತದೆ.
ಈ ಮೊದಲು ಚಂದ್ರನಲ್ಲಿ ಮೊದಲು ಮಾನವನನ್ನು ಇಳಿಸಿದ ಗರಿಮೆ ಅಮೆರಿಕಾಗೆ ಇದೆ, ಈ ಬಾರಿಯ ಯಾನದಲ್ಲಿ ಗಗನನೌಕೆಯು ಚಂದ್ರನ ದಕ್ಷಿಣ ದೃವದಲ್ಲಿ ಇಳಿಯಲಿದೆಯಂತೆ. ಅಮೆರಿಕದ ಈ ಯಾನದಲ್ಲಿ ಯಾವ ಮಹಿಳಾ ಗಗನಯಾತ್ರಿ ಪ್ರಯಾಣ ಮಾಡಲಿದ್ದಾರೆ ಎಂದು ನಾಸಾ ಇನ್ನೂ ತಿಳಿಸಿಲ್ಲ, ಇದು ಕುತೂಹಲ ಮೂಡಿಸಿದೆ. ಈ ಬೃಹತ್ ಯೋಜನೆಗೆ ನಾಸಾ ಜೊತೆಗೆ ಸ್ಪೇಸ್ ಎಕ್ಸ್’ನ ಎಲಾನ್ ಮಸ್ಕ್ ಮತ್ತು ಬ್ಲೂ ಒರಿಜಿನ್’ನ ಜೆಪ್ ಬೇಜೊಸ್ ಕೂಡ ಈ ಯೋಜನೆಯಲ್ಲಿ ಸಹಭಾಗಿತ್ವ ಪಡೆದಿದ್ದಾರೆ.