ರಾಜ್ಯ

ನಿಂತಿದ್ದ ಲಾರಿಗೆ ಕಾರು ಢಿಕ್ಕಿ; ಗರ್ಭಿಣಿ ಸಹಿತ ಏಳು ಮಂದಿ ದುರ್ಮರಣ

ಕಲಬುರಗಿ, ಸೆ.27: ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ತುಂಬು ಗರ್ಭಿಣಿ ಸಹಿತ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ಸಾವಳಗಿ ಕ್ರಾಸ್ ಬಳಿ ಆಳಂದ ರಸ್ತೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಮೃತರನ್ನು ಆಳಂತ ತಾಲೂಕಿನ ನಿವಾಸಿಗಳಾದ ಗರ್ಭಿಣಿ ಇರ್ಫಾನಾ ಬೇಗಂ(25), ರುಬಿಯಾ ಬೇಗಂ(50), ಅಬೇದಾಬಿ ಬೇಗಂ (50), ಜಯಚುನಬಿ(60), ಮುನೀರ್ (28), ಮುಹಮ್ಮದ್ ಅಲಿ (38) ಹಾಗೂ ಶೌಕತ್ ಅಲಿ(29) ಎಂದು ಗುರುತಿಸಲಾಗಿದೆ.

ಗರ್ಭಿಣಿ ಇರ್ಫಾನಾ ಬೇಗಂ ಅವರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ತುಂಬು ಗರ್ಭಿಣಿಯಾಗಿದ್ದ ಇರ್ಫಾನಾರಿಗೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲೆಂದು ಮನೆಮಂದಿ ಕಾರಿನಲ್ಲಿ ತೆರಳುತ್ತಿದ್ದರು. ಚಾಲಕ ಅವಸರವಾಗಿ ಕಾರು ಓಡಿಸುತ್ತಿದ್ದ ವೇಳೆ ರಸ್ತೆ ಪಕ್ಕ ಎದುರಿಗೆ ನಿಲ್ಲಿಸಿದ್ದ ಲಾರಿಗೆ ಹೊಡೆದಿದೆ ಎನ್ನಲಾಗಿದೆ.

ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎಲ್ಲಾ ಏಳು ಮಂದಿಯೂ ಸ್ಥಳದಲ್ಲೇ ಕೊನೆಯುಸಿ ರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕಾರು ಮತ್ತು ಲಾರಿ ಎರಡೂ ಕೂಡಾ ರಸ್ತೆ ಬದಿಯ ಹೊಂಡಕ್ಕೆ ಉರುಳಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!