‘RBI’ ನಿಂದ ಬ್ಯಾಂಕ್ ಗ್ರಾಹಕರಿಗೆ ಶುಭಸುದ್ದಿ : ಇನ್ಮುಂದೆ ಆನ್ ಲೈನ್ ಮೂಲಕವೂ ಚೆಕ್ ಡಿಪಾಸಿಟ್!

ನವದೆಹಲಿ : ಬ್ಯಾಂಕ್ ಗ್ರಾಹಕರಿಗೆ ಆರ್ ಬಿಐ ಸಿಹಿಸುದ್ದಿಯೊಂದನ್ನು ನೀಡಿದ್ದು, ಪಾಸಿಟಿವ್ ಪೇ ವ್ಯವಸ್ಥೆಯಡಿ 2021 ರ ಜನವರಿ 1 ರಿಂದ ಆನ್ ಲೈನ್ ನಲ್ಲೇ ಚೆಕ್ ಅನ್ನು ಡೆಪಾಸಿಟ್ ಮಾಡ ಬಹುದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಸಂಬಂಧ ಮಹತ್ವದ ಅಧಿಸೂಚನೆ ಹೊರಡಿಸಿದ್ದು, ಎಸ್ ಎಂಎಸ್, ಮೊಬೈಲ್ ಅಪ್, ಇಂಟರ್ ನೆಟ್ ಬ್ಯಾಂಕಿಂಗ್, ಎಟಿಎಂ ಮೂಲಕ ಚೆಕ್ ನಂಬರ್, ದಿನಾಂಕ ಮುಂತಾದ ಮಾಹಿತಿ ನಮೂದಿಸಿ ಚೆಕ್ ನಿಂದ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಬಹುದು.ಗ್ರಾಹಕರು 50 ಸಾವಿರ ರೂ. ಪಾವತಿಸುವಾಗ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದು ಸಂಪೂರ್ಣವಾಗಿ ಸ್ವಯಂ ಪ್ರೇರಿತವಾಗಿದ್ದರೂ ಸಹ ಚೆಕ್ ಪಾವತಿಗಳಲ್ಲಿನ ವಂಚನೆಯನ್ನು ತಡೆಯಲು ಕೇಂದ್ರ ಬ್ಯಾಂಕ್ ಈ ಕ್ರಮ ಕೈಗೊಂಡಿದೆ.
ಜನವರಿ 1 ರಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಆರ್ ಬಿಐ ಹೇಳಿದೆ. ಈ ವ್ಯವಸ್ಥೆಯಲ್ಲಿ 50 ಸಾವಿರಕ್ಕೂ ಹೆಚ್ಚು ಪಾವತಿ ಗಳನ್ನು ಮತ್ತೆ ಪುನರ್ರಚಿಸಬೇಕಾಗುತ್ತದೆ. ನಂತರ ಬ್ಯಾಂಕ್ ಗಳು ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸುತ್ತದೆ ಎಂದು ಆರ್ ಬಿಐ ಹೇಳಿದೆ.