
ಉಡುಪಿ ಸೆ. 29: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಕುಟುಂಬಗಳಿಗೆ ಇಂದು ಪರಿಹಾರ ಧನದ ಚೆಕ್ ಬ್ರಹ್ಮಾವರದ ಶಾಸಕರ ಕಚೇರಿಯಲ್ಲಿ ಶಾಸಕ ಶ್ರೀ ಕೆ. ರಘುಪತಿ ಭಟ್ ವಿತರಿಸಿದರು.

ವಾರಂಬಳ್ಳಿ ಗ್ರಾಮದ ರಂಜನ್ ರವರಿಗೆ ರೂ. 39,942, ಅರುಣಾ ಶೆಟ್ಟಿಗಾರ್ ರವರಿಗೆ ರೂ.11,000, ಹೇರೂರು ಗ್ರಾಮದ ಸುಶೀಲಾ ಶೆಡ್ತಿ ಯವರಿಗೆ ರೂ. 55,000, ಹಾರಾಡಿ ಗ್ರಾಮದ ಜಯಂತಿ ಯವರಿಗೆ ರೂ. 22,000, ಆನಂದ ಅಮೀನ್ ರವರಿಗೆ ರೂ. 24,726, ಚೇರ್ಕಾಡಿ ಗ್ರಾಮದ ಯಶೋಧ ರವರಿಗೆ ರೂ. 20,000, ಕಳ್ತೂರು ಗ್ರಾಮದ ಸುಶೀಲಾ ರವರಿಗೆ ರೂ. 39,942, ಉಪ್ಪೂರು ಗ್ರಾಮದ ಪೀಟರ್ ಡಿಸೋಜ ರವರಿಗೆ ರೂ. 35,000, ರಾಘವೇಂದ್ರ ರಾವ್ ರವರಿಗೆ ರೂ. 35,000 ಗಳ ಚೆಕ್ ಸೇರಿದಂತೆ 9 ಕುಟುಂಬಗಳಿಗೆ ಒಟ್ಟು ರೂ. 2,80,610/- ಮೊತ್ತದ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು, ಚಾಂತಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಉದಯ ಕಾಮತ್, ಉಪ್ಪೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿತ್ಯಾನಂದ, 38ನೇ ಕಳ್ತೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಮಾಕಾಂತ್ ಕಾಮತ್ ಮತ್ತು ಬ್ರಹ್ಮಾವರ ತಾಲೂಕು ಕಂದಾಯ ನಿರೀಕ್ಷಕರಾದ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.