ರಾಜ್ಯ
ಅನುಶ್ರೀ ಕುರಿತು ಹೊಸ ಬಾಂಬ್ ಸಿಡಿಸಿದ ಸಂಬರಗಿ
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾಣಿ ಮೇಲೆ ಆರೋಪ ಮಾಡಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಇದೀಗ ನಿರೂಪಕಿ ಅನುಶ್ರೀ ಕುರಿತಾಗಿಯೂ ಆರೋಪ ಗಳನ್ನು ಮಾಡಿದ್ದು, ಅನುಶ್ರೀಯನ್ನು ಶುಗರ್ ಡ್ಯಾಡಿ ರಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅನುಶ್ರೀ ಕುರಿತು ಟ್ವೀಟ್ ಮಾಡಿರುವ ಸಂಬರಗಿ, ಅನುಶ್ರೀ ಅರೆಸ್ಟ್ ಆಗದಂತೆ ಶುಗರ್ ಡ್ಯಾಡಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಹೆಚ್ಚು ದಿನ ಅದು ಸಾಧ್ಯವಿಲ್ಲ. ಈಗ ಆಕೆಗೆ ಒಳ್ಳೆಯ ಸಮಯವಷ್ಟೇ. ಆಕೆಗೆ ಏನಾಗಬೇಕೋ ಅದು ಆಗುತ್ತೆ. ಅನುಶ್ರೀ ಕುರಿತು ಸಾಕಷ್ಟು ಸ್ಫೋಟಕ ಮಾಹಿತಿ ಹೊರ ಬರಬೇಕಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅನುಶ್ರೀ ನಟಿಸಿರುವ ರಿಂಗ್ ಮಾಸ್ಟರ್ ಸಿನಿಮಾ ಥಾಯ್ ಸಿನಿಮಾ ಕೌಂಟ್ ಡೌನ್ ಚಿತ್ರದ ಕಾಪಿ. ಕಲೆ ಬದುಕಿನ ಅನುಕರಣೆಯೋ ಅಥವಾ ಬದುಕು ಸಿನಿಮಾಗಳ ಅನುಕರಣೆಯೋ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.