ರಾಷ್ಟ್ರೀಯ
ಮಹತ್ಮಾ ಗಾಂಧೀಜಿ – ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ : ಮಹಾನ್ ನಾಯಕರಿಗೆ ಪ್ರಧಾನಿ ಮೋದಿ ನಮನ
ನವದೆಹಲಿ : ಇಂದು ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ರಾಜ್ ಘಾಟ್ ಹಾಗೂ ವಿಜಯಘಾಟ್ ಗೆ ತೆರಳಿ ಬಾಪೂಜಿ ಹಾಗೂ ಶಾಸ್ತ್ರಿಜಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದರು.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಗಾಂಧಿ ಜಯಂತಿಯಂದು ನಾವು ಬಾಪುಗೆ ನಮಿಸುತ್ತೇವೆ. ಅವರ ಜೀವನ ಹಾಗೂ ಆದರ್ಶಗಳಿಂದ ನಾವು ಕಲಿಯುವುದು ಬಹಳಷ್ಟಿದೆ. ಸಮೃದ್ಧ ಭಾರತವನ್ನು ನಿರ್ಮಿಸುವಲ್ಲಿ ಬಾಪುವಿನ ಆದರ್ಶಗಳು ನಮಗೆ ಮಾರ್ಗದರ್ಶನವಾಗಿರಲಿ ಎಂದು ಮೋದಿ ಹೇಳಿದ್ದಾರೆ.
ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ವಿನಯವಂತ ಹಾಗೂ ದಿಟ್ಟ ಗುಣ ಹೊಂದಿದವರು. ಸರಳವಾಗಿ ಬದುಕಿದವರು. ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟರು. ಅವರ ಜನ್ಮ ಜಯಂತಿಯಾದ ಇಂದು ಅವರು ದೇಶಕ್ಕೆ ನೀಡಿರುವ ಕೊಡುಗೆಗೆ ಕೃತಜ್ಞತೆ ತಿಳಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.