
ಮೈಸೂರು: ಕೊರೊನಾ ಸೋಂಕಿನ ಹವಾಳಿಯಿಂದ ಜಗದ್ವಿಖ್ಯಾತ ಮೈಸೂರು ದಸರಾವನ್ನ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಇನ್ನು ಸರಳ ಆಚರಣೆಯ ನಡುವೆಯೇ ರಾಜವಂಶದ ಖಾಸಗಿ ದರ್ಬಾರು ನೋಡಲು ಕಾದು ಕುಳಿತವರಿಗೆ ಭಾರೀ ನಿರಾಸೆಯಾಗಿದೆ. ಕಾರಣ ಈ ಬಾರಿಯ ದರ್ಬಾರ್ ನೋಡಲು ಸಾರ್ವಜನಿಕರು ಹಾಗೂ ಮಾಧ್ಯಮ ಗಳಿಗೆ ನಿರ್ಬಂಧ ಹೇರಲಾಗಿದೆ.
ಸಾರ್ವಜನಿಕರಿಗೆ ನಿರ್ಬಂಧವಿದ್ದರೂ ಟಿ.ವಿಗಳ ಮೂಲಕ ಈ ದಸರಾವನ್ನು ಸವಿಯುವ ಅವಕಾಶ ವಿತ್ತು. ಆದರೆ ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಮಾಧ್ಯಮದವರಿಗೂ ನಿರ್ಬಂಧ ವಿಧಿಸಿರುವ ಕಾರಣ, ಖಾಸಗಿ ದಸರಾ ನೋಡುವ ಭಾಗ್ಯ ಈ ಬಾರಿ ಸಿಗುವುದಿಲ್ಲ. ಈ ವಿಷ್ಯವನ್ನ ಸ್ವತಃ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.