
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿ ಅತ್ಯಾಚಾರ, ಕೊಲೆ ಪ್ರಕರಣ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಿಹಾರ ದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
5 ವರ್ಷದ ಮಗನೊಂದಿಗೆ ಆಕೆಯನ್ನು ನದಿಗೆ ಎಸೆಯಲಾಗಿದೆ. ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ, ಈ ಪ್ರಯತ್ನದಲ್ಲಿ ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಬಿಹಾರದ ಬಕ್ಸಾರ್ ನಲ್ಲಿ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಗುವಿನೊಂದಿಗೆ ಬ್ಯಾಂಕ್ ಗೆ ತೆರಳುತ್ತಿದ್ದ ಮಹಿಳೆಯನ್ನು ಅಪಹರಿಸಿದ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಬಳಿಕ ತಾಯಿ, ಮಗುವನ್ನು ಕಟ್ಟಿ ನದಿಗೆ ಎಸೆದಿದ್ದಾರೆ. ಅಪರಾಧದಿಂದ ಪಾರಾಗಬಹುದು ಎಂದು ಭಾವಿಸಿ ಅವರು ಆಕೆಯನ್ನು ಮಗುವಿನೊಂದಿಗೆ ನದಿಗೆ ಎಸೆದಿದ್ದಾರೆ. ಮಹಿಳೆಯ ಕೂಗಾಟ ಕೇಳಿದ ಸ್ಥಳೀಯರು ಆಕೆಯನ್ನು ನದಿಯಿಂದ ರಕ್ಷಿಸಿದ್ದು, ಮಗು ಮೃತಪಟ್ಟಿದೆ.