ಕರಾವಳಿ

ಇನ್ನು ಮುಂದೆ ಹೆಲ್ಮೆಟ್ ಧರಿಸದಿದ್ದರೆ ದಂಡದ ಜೊತೆಗೆ ಚಾಲನಾ ಪರವಾನಿಗೆ ಅಮಾನತು

ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ಹಾಗೂ ಹಿಂಬಂದಿ ಸವಾರಿಗೂ ಹೆಲ್ಮೆಟ್ ಕಡ್ಡಾಯವೆಂದು ಇಲಾಖೆ ಆದೇಶ ಹೊರಡಿಸಿದ್ದು, ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶನವನ್ನು ನೀಡಿದೆ.

ಬೆಂಗಳೂರು : ರಾಜ್ಯದಲ್ಲಿ ಇನ್ನುಮುಂದೆ ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವವರಿಗೆ ದಂಡ ವಿಧಿಸುವುದು ಮಾತ್ರವಲ್ಲದೆ ಕನಿಷ್ಟ ಮೂರು ತಿಂಗಳು ವಾಹನಾ ಸವಾರರ ಚಾಲನಾ ಪರವಾನಿಗೆ ಯನ್ನು ಅಮಾನತುಗೊಳಿಸ ಬಹುದೆಂದು ಸಾರಿಗೆ ಇಲಾಕೆ ಆದೇಶ ಹೊರಡಿಸಿದೆ.

ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ಹಾಗೂ ಹಿಂಬಂದಿ ಸವಾರಿಗೂ ಹೆಲ್ಮೆಟ್ ಕಡ್ಡಾಯವೆಂದು ಇಲಾಖೆ ಆದೇಶ ಹೊರಡಿಸಿದ್ದು, ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶನವನ್ನು ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ
ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 129 ರ ಪ್ರಕಾರ ದ್ವಿಚಕ್ರ ವಾಹನ ಸವಾರರು (ನಾಲ್ಕು ವರ್ಷ ವಯಸ್ಸು ಮೇಲ್ಪಟ್ಟು) ಹೆಲ್ಮೆಟ್‌ ಧರಿಸು ವುದು ಕಡ್ಡಾಯವಾಗಿದೆ, ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 ರ ನಿಯಮ 2.10 ಉಪ ನಿಯಮ (1) ರ ಪ್ರಕಾರ ಎಲಾ ದ್ವಿಚಕ್ರ ವಾಹನ ಸವಾರರು, ಹಿಂಬದಿ ಸವಾರರಿಗೆ ಹೆಲ್ಮಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿರುತ್ತದೆ.

ದ್ವಿಚಕ್ರ ವಾಹನ ಸವಾರರು ಹೆಲ್ಮಟ್ ಧರಿಸದೇ ಸಂಚರಿಸುವ ಪರಿಣಾಮವಾಗಿ ರಸ್ತೆ ಅಪಘಾತಗಳ ಸಂದರ್ಭಗಳಲ್ಲಿ ಮರಣಹೊಂದುತ್ತಿರುತ್ತಾರೆ. ಇಂತಹ ಮರಣಗಳನ್ನು / ತೀವ್ರತರವಾದ ಗಾಯಗಳನ್ನು ತಡೆಗಟ್ಟಲು ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 129 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 230(1)ನ್ನು ಉಲ್ಲಂಘನೆ ಮಾಡಿ ಸಂಚರಿಸುತ್ತಿರುವ ವಾಹನ ಸವಾರರ ವಿರುದ್ದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 19.4-ಡಿ ಅನ್ವಯ ದಂಡ ವಸೂಲಾತಿಯೊಂದಿಗೆ ವಾಹನ ಸವಾರರ ಚಾಲನಾ ಪರವಾನಿಗೆಯನ್ನು ಕನಿಷ್ಠ ಮೂರು ತಿಂಗಳ ಅವಧಿಗೆ ಅಮಾನತ್ತು ಗೊಳಿಸುವ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!