ಕರಾವಳಿ
ಗ್ರಾಹಕರಿಗೆ ಬಿಗ್ ಶಾಕ್ : 150 ರೂ. ಗಡಿ ಸಮೀಪ ಈರುಳ್ಳಿ ಬೆಲೆ

ಬೆಂಗಳೂರು : ರಾಜ್ಯದ ಜನತೆಗೆ ಕೊರೊನಾಘಾತದ ನಡುವೆ ಈರುಳ್ಳಿ ದರ ಏರಿಕೆಯ ಶಾಕ್ ಎದುರಾಗಿದ್ದು, ಈರುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆ ನಾಶವಾಗಿದೆ. ಪರಿಣಾಮ ಈರುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ 1 ಕೆಜಿ ಈರುಳ್ಳಿ ದರ 120 ರೂ. ಇದ್ದರೆ,ಚಿಲ್ಲರೆ ಮಾರುಕಟ್ಟೆಯಲ್ಲಿ 110 ರಿಂದ 120 ರೂ.ಗೆ ಏರಿಕೆಯಾಗಿದೆ. ಎಪಿಎಂಸಿಯಲ್ಲಿ 130 ರಿಂದ 150 ರೂ. ಗಡಿ ದಾಟಿದೆ. ಪ್ರತಿದಿನ ಎಷ್ಟು ಚೀಲ ಈರುಳ್ಳಿ ಮಾರುಕಟ್ಟೆಗೆ ಬಂದಿದೆ ಎನ್ನುವ ಆಧಾರದ ಮೇಲೆ ಈರುಳ್ಳಿ ಬೆಲೆ ನಿರ್ಧಾರ ಮಾಡಲಾಗುತ್ತದೆ.