ತುಳು ನಟ ಸುರೇಂದ್ರ ಕೊಲೆ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಸತೀಶ್ ಕುಲಾಲ್

ಬಂಟ್ವಾಳ : ತುಳು ನಟ ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ. ಪೊಲೀಸರಿಗೆ ಆಡಿಯೋ ಸಂದೇಶ ಕಳುಹಿಸಿ ಆರೋಪಿ ಸತೀಶ್ ಕುಲಾಲ್ ತಪ್ಪೊಪ್ಪಿಕೊಂಡಿದ್ದಾನೆ.
ಕಳೆದ ನಿನ್ನೆ ಬಂಟ್ವಾಳದ ಬಿಸಿ ರೋಡ್ ನಲ್ಲಿದ್ದಂತ ತುಳು ನಟ ಹಾಗೂ ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಅವರನ್ನು ಅವರದ್ದೇ ಫ್ಲಾಟ್ ನಲ್ಲಿ ಬರ್ಬರವಾಗಿ ಕೊಲೆ ಗೈಯ್ಯಲಾಗಿತ್ತು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕೊಲೆಯ ಆರೋಪಿಗಾಗಿ ಬಲೆ ಕೂಡ ಬೀಸಿದ್ದರು.
ಇದರ ಮಧ್ಯೆ ಇಂದು ಪೊಲೀಸರಿಗೆ ಆಡಿಯೋ ಸಂದೇಶವೊಂದನ್ನು ಕಳುಸಿರಿವಂತ ಕೊಲೆ ಆರೋಪಿ ಸತೀಶ್ ಕುಲಾಲ್ ಎಂಬಾತ, ಸುರೇಂದ್ರ ಬಂಟ್ವಾಳ ಅವರನ್ನು ಕೊಲೆ ಗೈದಿದ್ದು ನಾನೆ. ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರವಾಗಿದೆ. ಕಿಶನ್ ಹೆಗ್ಡೆ ಹತ್ಯೆಗೆ ಸುರೇಂದ್ರ ಹಣದ ಸಹಾಯ ಮಾಡಿದ್ದನು. ಈ ವಿಷಯ ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡ್ತೀನಿ ಅಂದಿದ್ದ. ಹೀಗಾಗಿ ನಾನೇ ಕೊಲೆ ಮಾಡಿದ್ದು ಎಂಬುದಾಗಿ ಹೇಳಿದ್ದಾನಂತೆ.
ಇನ್ನೂ ತಾವು ಕೊಲೆ ಮಾಡಿದ ನಂತ್ರ ನಾನೀಗ ಕಾರವಾರದಲ್ಲಿಯೇ ಇದ್ದೇನೆ. ಒಂದೆಡರಡು ದಿನ ಗಳಲ್ಲಿ ಪೊಲೀಸರಿಗೆ ಶರಣಾಗುತ್ತೇನೆ ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾನಂತೆ. ಈ ಮೂಲಕ ತುಳು ನಟ ಸುರೇಂದ್ರ ಕೊಲೆ ಮಾಡಿದ್ದು ಸತೀಶ್ ಕುಲಾಲ್ ಎಂಬುದಾಗಿ ದೃಢಪಟ್ಟಂತೆ ಆಗಿದೆ.