ಕರಾವಳಿ
ನ.30ರವರೆಗೆ ಸ್ಥಗಿತಗೊಳ್ಳಲಿವೆ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು..!

ನವದೆಹಲಿ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ 23ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಸದ್ಯದಲ್ಲೇ ಮತ್ತೆ ಶುರುವಾಗಲಿವೆ ಎನ್ನುವ ಮಾತುಗಳು ಕೇಳಿ ಬರ್ತಿದ್ವು. ಆದ್ರೆ, ಇದಕ್ಕೆ ಡಿಜಿಸಿಎ ಸ್ಪಷ್ಟನೆ ನೀಡಿದ್ದು, ನವೆಂಬರ್ 30ರವರೆಗೆ ವಿಮಾನ ಹಾರಾಡುವುದಿಲ್ಲ ಎಂದಿದೆ.
ನವೆಂಬರ್ 30ರವರೆಗೆ ಭಾರತದಿಂದ ಭಾರತಕ್ಕೆ ಹೋಗುವ/ ಹೋಗುವ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ಅಮಾನತುಗೊಳಿಸಿದೆ ಎಂದು ಎಎನ್ ಐ ವರದಿ ಮಾಡಿದೆ.