
ವಿಟ್ಲ ನ. 04: ಪುಣಚ ಬಳಿ ಜಲ್ಲಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಸಣ್ಣಪುಟ್ಟ ಗಾಯಗೊಂಡ ಘಟನೆ ಪುಣಚ ಬುಳೇರಿಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ.
ಪುಣಚ ಬಳಿ ಇರುವ ಕೋರೆಯಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಪುಣಚ ಗ್ರಾಮದ ಪಾಲತ್ತಡ್ಕ ಎಂಬಲ್ಲಿ ನಿಯಂತ್ರಣ ಕಳೆದು ರಸ್ತೆಗೆ ಉರುಳಿ ಬಿದ್ದಿದೆ.ಈ ವೇಳೆ ಚಾಲಕ ಟಿಪ್ಪರ್ ಕೆಳಗಡೆ ತುಂಬ ಹೊತ್ತು ಸಿಲುಕಿಕೊಂಡಿದ್ದಾರೆ. ಹೊರ ಬರಲಾಗದೆ ಸ್ಥಳದಲ್ಲಿಯೇ ಚಾಲಕ ಮೃತ ಪಟ್ಟಿದ್ದಾರೆ.
ಸ್ಥಳೀಯರ ಸಹಕಾರದಲ್ಲಿ ಮೃತದೇಹವನ್ನು ಹೊರ ತೆಗೆಯಲಾಗಿದೆ. ಚಾಲಕನನ್ನು ರಫೀಕ್ ಹೇಳ ಲಾಗುತ್ತಿದೆ. ಕ್ಲೀನರ್ ಗೆ ಸಣ್ಣ ಪುಟ್ಟ ಗಾಯ ಗಳಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.