‘ವಿದ್ಯುತ್ ದರ ಏರಿಕೆ’ಯ ಶಾಕ್ ನಲ್ಲಿರುವವರ ಜನತೆಗೆ ‘ಮತ್ತೊಂದು ಬಿಗ್ ಶಾಕ್’.!
ಬೆಂಗಳೂರು : ಕೊರೋನಾ ಸೋಂಕಿನ ಸಂಕಷ್ಟದ ನಡುವೆಯೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಂತ ರಾಜ್ಯದ ಜನರಿಗೆ ಸರ್ಕಾರ ವಿದ್ಯುತ್ ದರ ಏರಿಕೆಯ ಶಾಕ್ ನೀಡಿತ್ತು. ಇಂತಹ ವಿದ್ಯುತ್ ದರ ಏರಿಕೆಯ ಶಾಕ್ ನಿಂದ ಹೊರ ಬರುವ ಮುನ್ನವೇ ರಾಜಧಾನಿಯ ಜನರಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಶೇ.12ರಷ್ಟು ನೀರಿನ ದರವನ್ನು ಹೆಚ್ಚಳ ಮಾಡಲು ಬಿ ಡಬ್ಯೂ ಎಸ್ ಎಸ್ ಬಿ ಮುಂದಾಗಿದೆ.
ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ವಿದ್ಯುತ್ ದರ ಏರಿಕೆ ಮಾಡಿ, ಕೊರೋನಾ ಸೋಂಕಿನ ಸಂಕಷ್ಟದಲ್ಲಿರುವ ಜನರಿಗೆ ಶಾಕ್ ನೀಡಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಜಲ ಮಂಡಳಿ, 6 ವರ್ಷಗಳಿಂದ ರಾಜ್ಯದ ರಾಜಧಾನಿಯಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಹೀಗಾಗಿ ನೀರಿನ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಬಿ ಡಬ್ಯೂ ಎಸ್ ಎಸ್ ಬಿಯು ಬೆಂಗಳೂರಿನಲ್ಲಿ ಶೇ.12ರಷ್ಟು ನೀರಿನ ದರ ಹೆಚ್ಚಳದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದ್ದು, ಒಂದು ವೇಳೆ ಸರ್ಕಾರ ನೀರಿನ ದರ ಹೆಚ್ಚಳಕ್ಕೆ ಅನುಮತಿ ಸೂಚಿಸಿದ್ರೇ, ಸದ್ಯದಲ್ಲಿಯೇ ನೀರಿನ ದರ ಬೆಂಗಳೂರಿನಲ್ಲಿ ಏರಿಕೆಯಾಗಲಿದೆ. ಶೇ.12ರಷ್ಟು ನೀರಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಕಾದು ನೋಡಬೇಕಿದೆ.