ಜಾರ್ಜಿಯ, ಮಿಷಿಗನ್ ಕಾನೂನು ಸಮರದಲ್ಲಿ ಸೋತ ಟ್ರಂಪ್; ಬೈಡೆನ್ ಗೆಲುವು ನಿಶ್ಚಿತ?
ಭಾರಿ ಕುತೂಹಲವೇರ್ಪಟ್ಟಿದ್ದ ಜಾರ್ಜಿಯ ಮತ್ತು ಮಿಷಿಗನ್ ರಾಜ್ಯಗಳ ಮತ ಎಣಿಕೆ ತಡೆಹಿಡಿಯು ವಂತೆ ಡೊನಾಲ್ಡ್ ಟ್ರಂಪ್ ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಕುತೂಹಲವೇರ್ಪಟ್ಟಿದ್ದ ಜಾರ್ಜಿಯ ಮತ್ತು ಮಿಷಿಗನ್ ರಾಜ್ಯಗಳ ಮತ ಎಣಿಕೆ ತಡೆಹಿಡಿಯು ವಂತೆ ಡೊನಾಲ್ಡ್ ಟ್ರಂಪ್ ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದರೆ ಟ್ರಂಪ್ ಅವರ ತಂಡವು ಇಷ್ಟಕ್ಕೆ ನಿಲ್ಲದೆ ನೆವಾಡಾದಲ್ಲಿ ಕಾನೂನು ಸಮರಕ್ಕೆ ಇಳಿದಿದೆ.
ಜಾರ್ಜಿಯಾದಲ್ಲಿ ತಡವಾಗಿ ಬಂದ 53 ಬ್ಯಾಲೆಟ್ ಗಳನ್ನು ಸಕಾಲಕ್ಕೆ ಬಂದ ಬ್ಯಾಲೆಟ್‌ಗಳ ಜತೆ ಮಿಶ್ರ ಮಾಡಲಾಗಿದೆ ಎಂದು ಆಪಾದಿಸಿದ್ದ ಟ್ರಂಪ್ ತಂಡ, ಮಿಷಿಗನ್‌ನಲ್ಲಿ ಕೂಡಾ ವಂಚನೆ ನಡೆದಿದೆ ಆದ್ದರಿಂದ ಮತ ಎಣಿಕೆಯನ್ನು ತೆಡೆಹಿಡಿಯುವಂತೆ ಕೋರಿತ್ತು. ಆದರೆ ಅವರ ಎರಡೂ ಮನವಿಗಳನ್ನು ರಾಜ್ಯ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.
‘ಉಸಿರು ಬಿಗಿ ಹಿಡಿದ ಅಮೆರಿಕಾ’ – ವಿಶ್ವದ ಪ್ರಮುಖ ಪತ್ರಿಕೆಗಳ ಕಣ್ಣಲ್ಲಿ ಅಮೆರಿಕಾ ಚುನಾವಣಾ ಫಲಿತಾಂಶ ಬ್ಯಾಲೆಟ್ ಮತಗಳು ಅಸಿಂಧು ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ ಎಂದು ಜಾರ್ಜಿಯಾ ಹಾಗೂ ಮಿಷಿಗನ್ ರಾಜ್ಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ನಂತರ ನೆವಾಡಾದ ಜನನಿಬಿಡ ಕ್ಲಾರ್ಕ್ ಕೌಂಟಿಯಲ್ಲಿ ವಂಚನೆ ನಡೆದಿವೆ ಎಂದು ಟ್ರಂಪ್ ತಂಡ ಆರೋಪಿಸಿದೆ.
ಅಧ್ಯಕ್ಷ ಸ್ಥಾನಕ್ಕೆ ಒಟ್ಟು 270 ಸ್ಥಾನಗಳ ಅಗತ್ಯ ವಿದ್ದು, ಪ್ರಸ್ತುತ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ 264 ಸ್ಥಾನಗಳಲ್ಲಿ ಗೆಲುವು ಕಂಡಿದ್ದು, ಟ್ರಂಪ್ 214 ಸ್ಥಾನಗಳನ್ನು ಪಡೆದಿದ್ದಾರೆ. ಅಧಿಕಾರ ಹಿಡಿಯಲು ಬೈಡೆನ್‌ಗೆ ಇನ್ನು ಕೇವಲ 6 ಸ್ಥಾನಗಳ ಅಗತ್ಯವಿದ್ದು, ಆರು ಸ್ಥಾನಗಳಿರುವ ನೆವಾಡಾ ರಾಜ್ಯದಲ್ಲಿ ಅವರು ಮುನ್ನಡೆಯಲ್ಲಿದ್ದಾರೆ. ಟ್ರಂಪ್ ತಾನು ಮುನ್ನಡೆ ಯಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಗೆದ್ದರೂ 265 ಸ್ಥಾನಗಳನ್ನಷ್ಟೇ ಪಡೆಯಲಿದ್ದಾರೆ. ಹೀಗಾಗಿ ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಆಯ್ಕೆ ಯಾಗುವುದು ನಿಚ್ಚಳವಾಗಿದೆ ಎನ್ನಲಾಗುತ್ತಿದೆ.