ಸಿಲಿಕಾನ್ ಸಿಟಿ ಪೊಲೀಸರಿಂದ ಬೆಳ್ಳಂಬೆಳಿಗ್ಗೆ ಎರಡು ಕಡೆ ಶೂಟೌಟ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎರಡು ಕಡೆ ಗುಂಡಿನ ಸದ್ದು ಕೇಳಿ ಬಂದಿದೆ. ಪ್ರತ್ಯೇಕ ಪ್ರಕರಣ ದಲ್ಲಿ ಪೊಲೀಸರು ಇಬ್ಬರು ಆರೋಪಿಗಳ ಮೇಲೆ ಗುಂಡು ಚಲಾಯಿಸಿದ್ದಾರೆ.
ಒಂದು ಘಟನೆ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯ ನಾರಾಯಣ ನಗರದಲ್ಲಿ ನಡೆದರೆ, ಇನ್ನೊಂದು ಘಟನೆ ಬ್ಯಾಡರಹಳ್ಳಿ ಬಳಿಯ ಬ್ರಹ್ಮದೇವ ಬಳಿ ನಡೆದಿದೆ.
ಕೋಣನಕುಂಟೆಯಲ್ಲಿ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ಕಾಲಿಗೆ ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಕುಮಾರ್ ಫೈರಿಂಗ್ ಮಾಡಿದ್ದಾರೆ. ಮಂಜ ಅಲಿಯಾಸ್ ಬೊಂಡ ಮಂಜ, ತಲಘಟ್ಟಪುರ ಠಾಣೆ ರೌಡಿಶೀಟರ್ ಆಗಿದ್ದು. ಆರೋಪಿ ವಿರುದ್ಧ ಬರೋಬ್ಬರಿ 23 ಪ್ರಕರಣಗಳು ದಾಖಲಾಗಿದ್ದವು.
ಇನ್ನೊಂದು ಘಟನೆ ಬುಧವಾರ ಮುಂಜಾನೆ ನಡೆದಿದ್ದು, ವಿಶ್ವ ಅಲಿಯಾಸ್ ಸೈಕೋ ಗುಂಡೇಟು ತಿಂದ ಕೊಲೆ ಆರೋಪಿ. ಈ ಘಟನೆ ಬ್ಯಾಡರಹಳ್ಳಿ ಬಳಿಯ ಬ್ರಹ್ಮದೇವ ಬಳಿ ನಡೆದಿದೆ. ಪೇದೆ ಮಂಜುನಾಥ್ ಮೇಲೆ ವಿಶ್ವ ಡ್ಯಾಗರ್‌ನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಎಸಿಪಿ ನಂಜುಂಡೇಗೌಡ ವಿಶ್ವನ ಮೇಲೆ ಗುಂಡು ಹಾರಿಸಿದ್ದಾರೆ.