ಕರಾವಳಿ

ಬಿಲ್ಲವ ಸಮುದಾಯವನ್ನು ಸರ್ಕಾರ ಈ ರೀತಿ ವಂಚಿಸುತ್ತಿರುವುದು ನ್ಯಾಯೋಚಿತವಲ್ಲ

ಕರ್ನಾಟಕ ಸರ್ಕಾರ ಬೇರೆ ಬೇರೆ ಜಾತಿ ಸಮುದಾಯಗಳ ನಿಗಮ,ಪ್ರಾಧಿಕಾರದ ಬೇಡಿಕೆಯನ್ನು ಈಡೇರಿಸಿದ್ದು ಸಮರ್ಥನೀಯ.ಆದರೆ ನಮ್ಮ ಬಿಲ್ಲವ ಸಮುದಾಯವನ್ನು ನಡೆಸಿಕೊಳ್ಳುತ್ತಿರುವ ರೀತಿ ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ‌.

ಉಪಪಂಗಡಗಳನ್ನೊಳಗೊಂಡಂತೆ ಸಂಖ್ಯಾಪ್ರಾಬಲ್ಯವಿರುವ ಬಿಲ್ಲವ ಸಮುದಾಯ ಈವರೆಗೆ ಹಲವಾರು ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದ್ದಾಗ್ಯೂ ಸರ್ಕಾರ ತಾತ್ಸಾರ ತೋರುತ್ತಿದೆ.ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಯ ನೇತೃತ್ವದಲ್ಲಿ 50,000 ಸಮಾಜಬಾಂಧವರನ್ನು ಒಗ್ಗೂಡಿಸಿ ಬೃಹತ್ ಬಿಲ್ಲವ ಸಮಾವೇಶ ದ ಮುಖಾಂತರ “ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ” ಸ್ಥಾಪಿಸಬೇಕೆಂಬ ಪ್ರಮುಖ ಬೇಡಿಕೆಯನ್ನು ನೀಡಲಾಗಿತ್ತು.ಇದರೊಂದಿಗೆ ಇತರ ಬೇಡಿಕೆಗಳ ಕುರಿತು ಪದೇ ಪದೇ ಕರಾವಳಿಯ ಜನಪ್ರತಿನಿಧಿಗಳಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾಗ್ಯಾ ನಕಾರಾತ್ಮಕ ಪ್ರತಿಕ್ರಿಯೆಯಿದೆ.ಕೇವಲ ಚುನಾವಣೆ ಸಂದರ್ಭ ಮಾತ್ರ ಬಿಲ್ಲವ ಸಮಾಜವನ್ನು ಬಳಸಿಕೊಳ್ಳುತ್ತಿರುವ ಹುನ್ನಾರದ ಕುರಿತು ಸಮಾಜ ಜಾಗೃತಗೊಳ್ಳುತ್ತಿದೆ.ಕರಾವಳಿಯ ಶಾಸಕರು,ಸಂಸದರು ಮತ್ತು ಎಲ್ಲಾ ಸ್ತರದ ಜನಪ್ರತಿನಿಧಿಗಳು ಕೇವಲ ಸಭಾವೇದಿಕೆಯ ಭಾಷಣಕ್ಕೆ ಮಾತ್ರ ಬಿಲ್ಲವ ಸಮಾಜದ ಒಲೈಕೆ ಮಾಡುತ್ತಾ ಯಾವುದೇ ಅನುಕೂಲ ಮಾಡದಿರುವ ಕುರಿತು ಭವಿಷ್ಯದಲ್ಲಿ ಸಮಾಜಬಾಂಧವರು ಇಂತವರ ವಿರುದ್ದ ಸೂಕ್ತ ನಿರ್ಧಾರ ಕೈಗೊಳ್ಳಲು ಪ್ರೇರಣೆ ನೀಡಿದೆ.

ಇತರ ಸಮುದಾಯಕ್ಕೆ ಮಂಜೂರಾಗುತ್ತಿರುವ ಎಲ್ಲಾ ಅನುಕೂಲತೆಗಳಲ್ಲಿ ಬಿಲ್ಲವ ಸಮುದಾಯವನ್ನು ವಂಚಿಸುತ್ತಿರುವುದು ನ್ಯಾಯೋಚಿತವಲ್ಲ.

ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಹಾಗೂ ಸರ್ವಸದಸ್ಯರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ).

Related Articles

Leave a Reply

Your email address will not be published. Required fields are marked *

Back to top button
error: Content is protected !!