ರಾಷ್ಟ್ರೀಯ

ಲಕ್ಷ್ಮಿ ವಿಲಾಸ್ ಬ್ಯಾಂಕ್ ಗೆ ನಿರ್ಬಂಧ ವಿಧಿಸಿದ ಆರ್ ಬಿಐ| ಆತಂಕದಲ್ಲಿ ಠೇವಣಿದಾರರು!

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2020 ರ ಡಿಸೆಂಬರ್ 16 ರವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್‌ವಿಬಿ) ಯ ಎಲ್ಲಾ ವ್ಯವಹಾರವನ್ನು ಸ್ಥಗಿತಗೊಳಿಸಿ ಆದೇಶ ನೀಡಿದೆ.

ಒಂದು ತಿಂಗಳ ಅವಧಿಯ ನಿಷೇಧದ ಸಮಯ ದಲ್ಲಿ, ನಗದು ಹಿಂಪಡೆಯುವಿಕೆಯ ಮಿತಿಯನ್ನು ಗ್ರಾಹಕರಿಗೆ ತಿಂಗಳಿಗೆ 25 ಸಾವಿರ ರೂ.ಗೆ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಇನ್ನು ಕೆಲವು ವಿನಾಯಿತಿಗಳು ಒಳಪಟ್ಟಿರುತ್ತದೆ. ಅದರೆ ಅದು ಪೂರ್ವ ಅನುಮತಿಯೊಂದಿಗೆ ಮಾತ್ರವಾಗಿರುತ್ತದೆ. ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರಿಗೆ ಅಥವಾ ಬ್ಯಾಂಕ್ ಮೇಲೆ ಅವಲಂಬಿತವಾಗಿರುವ ಯಾವುದೇ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಗೆ ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಲು ಠೇವಣಿದಾರರಿಗೆ 5 ಲಕ್ಷ ರೂ.ವರೆಗೆ ನೀಡಬಹುದಾಗಿದೆ.

ಇದರಂತೆಯೇ ಮದುವೆ ಮತ್ತು ಕಡ್ಡಾಯ ಕಾರ್ಯಕ್ರಮಗಳ ವಿಚಾರದಲ್ಲಿ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಅದಕ್ಕೂ ನೀತಿಯನ್ನು ಪಾಲಿಸುವುದು ಕಡ್ಡಾಯವಾಗಿದೆ. ಯೆಸ್ ಬ್ಯಾಂಕ್ ನಂತರ ಎಲ್ವಿಬಿ ಎರಡನೇ ಖಾಸಗಿ ವಲಯದ ಬ್ಯಾಂಕ್ ಆಗಿದೆ, ಇದು ಈ ವರ್ಷದಲ್ಲಿ ಸಂಕಷ್ಟದಲ್ಲಿದೆ ಮಾರ್ಚ್ ನಲ್ಲಿ ಯೆಸ್ ಬ್ಯಾಂಕ್ ಅನ್ನು ನಿಷೇಧದ ಅಡಿಯಲ್ಲಿ ಇರಿಸಲಾಗಿತ್ತು.
ಈ ಮಧ್ಯೆ ಆರ್‌ಬಿಐ ನೇಮಕಗೊಳಿಸಿದ ಆಡಳಿತಾಧಿಕಾರಿ ಟಿ.ಎನ್. ಮನೋಹರನ್ ಅವರು ಭಯಭೀತರಾಗದಂತೆ ಕೇಳಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!