ಕರಾವಳಿ
ಉದ್ಯಾವರ: ನ.22ರಂದು ‘ನೆಹರೂ ವಿಡಿಯೋ ಭಾಷಣ’ ಸ್ಪರ್ಧೆ ಬಹುಮಾನ ವಿತರಣೆ
ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ‘ಉದ್ಯಾವರ ಫ್ರೆಂಡ್ಸ್ ಸರ್ಕಲ್’ ಆಶ್ರಯದಲ್ಲಿ ನೆಹರೂರವರ ಬಗ್ಗೆ ಏರ್ಪಡಿಸಿದ ವಿಡಿಯೋ ಭಾಷಣ ಸ್ಪರ್ಧೆ. ಸಮಾರಂಭದಲ್ಲಿ ಉಪನ್ಯಾಸಕರಾದ ಡಾ.ಪ್ರಸಾದ್ ರಾವ್ ಎಂ.ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ್ ಕುಗ್ವೆ ಭಾಗವಹಿಸಲಿರುವರು.
ಉದ್ಯಾವರ : ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ‘ಉದ್ಯಾವರ ಫ್ರೆಂಡ್ಸ್ ಸರ್ಕಲ್’ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿ ಗಳಿಗೆ ಕನ್ನಡದಲ್ಲಿ ನೆಹರೂರವರ ಬಗ್ಗೆ ಏರ್ಪಡಿಸಿದ ವಿಡಿಯೋ ಭಾಷಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನ.22 ಭಾನುವಾರ ಬೆಳಿಗ್ಗೆ 9.30ಕ್ಕೆ ಮಸೀದಿಯ ಬಳಿಯ ಸಂಸ್ಥೆಯ ಕಾರ್ಯಾಲಯದಲ್ಲಿ ಜರಗಲಿರುವುದು.