ಮನೆ ದರೋಡೆ ಪ್ರಕರಣ : ನಾಲ್ಕು ಜನ ಆರೋಪಿಗಳ ಬಂಧನ….

ಸಮೀಪದ ಧರ್ಮಸ್ಥಳದ ಮನೆಯೊಂದರ ದರೋಡೆ ಪ್ರಕರಣದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತು 8ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಪಿ.ಇರ್ಫಾನ್,ಮಹಮ್ಮದ್ ತೌಸೀಫ್,ಚಿದಾನಂದ ಗೌಡ,ಮೋಹನ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಬೆಳ್ತಂಗಡಿ ವೃತ್ತದ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಂಜ ಗ್ರಾಮದ, ನಿಡಿಗಲ್ ಎಂಬಲ್ಲಿ ಮನೆ ದರೋಡೆ ಯತ್ನ ಪ್ರಕರಣ ನಡೆದಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ,ಮೇಲಾಧಿಕಾರಿಗಳ ಆದೇಶದಂತೆ ಇದರ ಪತ್ತೆ ಬಗ್ಗೆ ಸಿಪಿಐ ಬೆಳ್ತಂಗಡಿ ಮತ್ತು ಪಿಎಸ್‌ಐ ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ಎರಡು ತಂಡಗಳನ್ನು ರಚಿಸಿ, ಬಂಟ್ವಾಳ ತಾಲೂಕು ಮೇಲ್ಕಾರ್ ಬಳಿ ಪಿ ಇರ್ಫಾನ್ ಪ್ರಾಯ 28 ವರ್ಷ, ತಂದೆ: ದಿ. ಮಹಮ್ಮದ್ ಹನೀಫ್, ವಾಸ: ಬಜಾಲ್ ಪಡ್ಪು ಮನೆ, ಬಜಾಲ್ ಗ್ರಾಮ, ಮಂಗಳೂರು ತಾಲೂಕು ಮತ್ತು ಮಹಮ್ಮದ್ ತೌಸೀಫ್ @ ತಚ್ಚು, ಪ್ರಾಯ 26 ವರ್ಷ, ತಂದೆ ಅಬ್ದುಲ್ ಲತೀಫ್, ವಳಚ್ಚಿಲ್ ಮನೆ, ಅರ್ಕುಳ ಗ್ರಾಮ, ಮಂಗಳೂರು ತಾಲೂಕು ಎಂಬಿಬ್ಬರು ಆರೋಪಿಗಳು ಇರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿ ಗಳನ್ನು ವಶಕ್ಕೆ ಪಡೆದು, ಅವರ ಮಾಹಿತಿಯಂತೆ ಇತರ ಆರೋಪಿಗಳಾದ ಚಿದಾನಂದ ಗೌಡ ಪ್ರಾಯ 25 ವರ್ಷ, ತಂದೆ: ದಿ. ಶಿವಪ್ಪ , ವಾಸ: ಪರಾಳ ಮನೆ, ಬೆಳಾಲು ಗ್ರಾಮ, ಬೆಳ್ತಂಗಡಿ ತಾಲೂಕು, ಮತ್ತು ಮೋಹನ ಪ್ರಾಯ 32 ವರ್ಷ, ತಂದೆ: ಶಿವರಾಮ್ ಟಿ, ಕಂದೂರು ಮನೆ, ಕಲ್ಮಂಜ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರುಗಳನ್ನು, ವಶಕ್ಕೆ ಪಡೆದು ಠಾಣೆಗೆ ತಂದು ಕೂಲಂಕುಶವಾಗಿ ವಿಚಾರಿಸಿದಾಗ, ಕಲ್ಮಂಜ ಗ್ರಾಮದ, ನಿಡಿಗಲ್ ಎಂಬಲ್ಲಿ ಮನೆ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಈ ಪ್ರಕರಣದಲ್ಲಿ ದಸ್ತಗಿಯಾಗಿರುವ ಮಹಮ್ಮದ್ ತೌಸೀಫ್ @ ತಚ್ಚು ಈ ಮೊದಲು ಅನೇಕ ಪ್ರಕಣಗಳಲ್ಲಿ ಭಾಗಿರುವುದಾಗಿದೆ. ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ದಸ್ತಗಿರಿಗೆ ಬಾಕಿ ಇರುತ್ತದೆ.
ಮೇಲಿನ ಆರೋಪಿತರುಗಳಿಂದ ಪ್ರಕರಣದಲ್ಲಿ ಭಾಗಿಯಾಗಿರುವ ಮಾರುತಿ ಸುಜುಕಿ ಕಂಪೆನಿಯ ವಿಟರಾ ಬ್ರೀಝಾ ಹಾಗೂ ಸ್ವಿಫ್ಟ್ ಕಾರು, ತಲುವಾರು ಮತ್ತು ಕಬ್ಬಿಣದ ರಾಡ್ , ಹಾಗೂ ನಾಲ್ಕು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 8,00,000/-. ಆಗಿರುತ್ತದೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಬಿ.ಎಂ ಲಕ್ಷ್ಮೀ ಪ್ರಸಾದ್ ಐಪಿಎಸ್ ರವರ ಮಾರ್ಗದರ್ಶನದಂತೆ, ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವೆಲೈಂಟೈನ್ ಡಿಸೋಜಾ ರವರ ನಿರ್ದೇಶನದಂತೆ, ಶ್ರೀ ಸಂದೇಶ್ ಪಿಜಿ ಸಿಪಿಐ ಬೆಳ್ತಂಗಡಿ, ಶ್ರೀ ಪವನ್ ನಾಯಕ್ ಪಿಎಸ್ಐ, ಧರ್ಮಸ್ಥಳ ಶ್ರೀ ಚಂದ್ರಶೇಖರ್ ಕೆ .ಪಿಎಸ್‌ಐ, ಧರ್ಮಸ್ಥಳ ಮತ್ತು ಪತ್ತೆ ತಂಡದಲ್ಲಿ ಸಿಬ್ಬಂದಿಗಳಾದ ತೋಮಸ್ ಇಜಿ, ಬೆನ್ನಿಚ್ಚನ್, ವಿಶ್ವನಾಥ್ ನಾಯ್ಕ್, ವಿಜು ಎಂಜಿ, ರಾಜೇಶ್ ಎನ್ ,ಪ್ರವೀಣ್ ಇಬ್ರಾಹಿಂ ಗರ್ಡಾಡಿ, ಅಬ್ದುಲ್ ಲತೀಫ್, ಪ್ರಮೋದ್ ನಾಯ್ಕ್, ಮಹಮ್ಮದ್ ಅಸ್ಲಾಂ, ರಾಹುಲ್ ಹಾಗೂ ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ಭಾಗವಹಿಸಿರುತ್ತಾರೆ.