ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ಕಡಿಯಾಳಿ ವತಿಯಿಂದ ಪೇಜಾವರಶ್ರೀಗಳ ಪ್ರಥಮ ಆರಾಧನಾ ಮಹೋತ್ಸವ

ಉಡುಪಿ : ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಟ್ರೈನಿಂಗ್ (ಪ್ರಸ್ತುತ ಕೆನರಾ ಬ್ಯಾಂಕ್) ಸೆಂಟರ್ ಬಳಿ ಇರುವ ಇಂದ್ರಾಳಿ ವಾರ್ಡಿನ ಮಂಚಿಕುಮೇರಿ ಕೊರಗ ಸಮುದಾಯದ ಬಂಧುಗಳೊಂದಿಗೆ ಅಂಬೇಡ್ಕರ್ ಭವನದಲ್ಲಿ ಪೇಜಾವರಶ್ರೀಗಳ ಪ್ರಥಮ ಆರಾಧನಾ ಮಹೋತ್ಸವದ ಸಲುವಾಗಿ” ಪೇಜಾವರ ಶ್ರೀ ಸ್ಮರಣೆ” ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟ್ ರಿ ಕಡಿಯಾಳಿ ವತಿಯಿಂದ ಕಳೆದ 10/12 ವರ್ಷ ಗಳಿಂದ ವಿದ್ಯುತ್ ಸಂಪರ್ಕ ಇಲ್ಲದ ದಲಿತ ಸಮಾಜ ದ 3 ಮನೆಗಳಿಗೆ ಶ್ರೀಮತಿ ಆಶಾ, ಶ್ರೀಮತಿ ಗೀತಾ, ಶ್ರೀಮತಿ ಪ್ರಿಯ ಇವರುಗಳ ಮನೆಗೆ ಉಚಿತ ವಿದ್ಯುತ್ ಸಂಪರ್ಕದ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಜಿಲ್ಲಾ ಸಂಘಚಾಲಕರಾದ ಡಾ.ನಾರಾಯಣ್ ಶೆಣೈ, ಉಡುಪಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮಿ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಅಂಚನ್, ಇಂದ್ರಾಳಿ ನಗರ ಸಭಾ ಸದಸ್ಯರಾದ ಅಶೋಕ್ ನಾಯಕ್, ಸೋದೆ ವಾದಿರಾಜ ಟ್ರಸ್ಟಿನ ಕಾರ್ಯದರ್ಶಿಗಳಾದ ರತ್ನ ಕುಮಾರ್ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಪ್. ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಕೆ. ರಾಘವೇಂದ್ರ ಕಿಣಿ ಸ್ವಾಗತಿಸಿ, ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರ್ವಹಿಸಿದರು. ಆಸರೆ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಸತೀಶ್ ಕುಲಾಲ್ ವಿದ್ಯಾ ಶಾಮಸುಂದರ್ ಸಂದೀಪ್ ಸನೀಲ್, ನಗರಸಭಾ ಸದಸ್ಯರಾದ ಶ್ರೀಮತಿ ಕಲ್ಪನಾ ಸುಧಾಮ, ಶ್ರೀಮತಿ ವಿಜಯಲಕ್ಷ್ಮಿ, ಸ್ಥಳೀಯರಾದ ಸೀತಾರಾಮ ನಾಯಕ್ ಅರವಿಂದ ಶೆಟ್ಟಿ, ಶ್ರೀಮತಿ ಸುಜಾಲ ಸತೀಶ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಈ ವಿದ್ಯುತ್ ಜೋಡಣೆ ವ್ಯವಸ್ಥೆಯನ್ನು ಶ್ವೇತಾ ಎಲೆಕ್ಟ್ರಿಕಲ್ಸ್ ನ ಹರೀಶ್ ಎನ್ ದೇವಾಡಿಗ ಮಾಡಿದರು.