ರಾಜ್ಯ

ಉಜ್ಜಿನಿ : ಪೀಠದ ಬಗ್ಗೆ ಹೇಳಿಕೆ ನಿಲ್ಲದಿದ್ದಲ್ಲಿ, ರಂಭಾಪುರಿ ಪೀಠದ ಮುಂದೆ ಸತ್ಯಾಗ್ರಹ ಸ್ವಾಮೀಜಿಗಳ ಎಚ್ಚರಿಕೆ

ಬಳ್ಳಾರಿ ಜಿಲ್ಲೆ ಕೊಟ್ಟೂರು ಕ್ಷೇತ್ರದ ಉಜ್ಜಿನಿ ಪೀಠ ಹಾಗೂ ಶ್ರೀಸ್ವಾಮೀಜಿಗಳ ಬಗ್ಗೆ, ಶ್ರೀ ರಂಭಾಪುರಿ ಜಗದ್ಗುರು ಹಾಗೂ ಕೇದಾರ ಜಗದ್ಗುರು ಗಳು ಹೇಳಿಕೆ ನೀಡುವುದನ್ನ ನಿಲ್ಲಿಸಬೇಕಿದೆ. ಹಾಗೇ ಅವರು ಮುಂದುವರೆದಲ್ಲಿ ಹುಣ್ಣಿಮೆ ದಿನ ರಂಭಾಪುರಿ ಪೀಠದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷ ಹಾಗೂ ಮುಷ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಅವರು ಕೊಟ್ಟೂರು ಪಟ್ಟಣದ ಚಾನುಕೋಟಿ ಮಠದಲ್ಲಿ ಶುಕ್ರವಾರ,ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಹಾಗೂ ಮಠಾದೀಶರ ಧರ್ಮ ಪರಿಷತ್ ಮತ್ತು ಕೊಟ್ಟೂರು ಕಟ್ಟಮನೆ ದೈವಸ್ಥರು ಹಾಗೂ ಉಜ್ಜಿನಿ ಗ್ರಾಮದ ಒಂಬತ್ತು ಪಾದದ ದೈವಸ್ಥರು ಜಂಟಿಯಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಂಭಾಪುರಿ ಪೀಠದ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಸ್ವಾಮೀಜಿ ಎರಡು ವಿಲ್ ಬರೆದಿದ್ದರು, ಇಂದಿನ ಜಗದ್ಗುರು ಯಾವ ವಿಲ್ ಅನ್ವಯ ಜಗದ್ಗುರು ಗಳಾಗಿದ್ದಾರೆಎನ್ನುವ ಮೂಲಕ.ಈ ಹೊಸ ವಿಚಾರವನ್ನು ಸ್ವಾಮೀಜಿ ಸಭೆಗೆ ಬಹಿರಂಗ ಪಡಿಸಿದರು.

ಕೆ.ಅಯ್ಯನಹಳ್ಳಿ ಪುರವರ್ಗ ಮಠದ ಮಹೇಶ್ವರ ಸ್ವಾಮೀಜಿ-ಕೆ ಅಯ್ಯನಹಳ್ಳಿ ಪುರವರ್ಗಮಠದ ಮಹೇಶ್ವರ ಸ್ವಾಮೀಜಿಳು ಮಾತನಾಡಿದರು, ಸರ್ವತೋಮುಖವಾಗಿ ಉಜ್ಜಿನಿ ಪೀಠ ಅಭಿವೃದ್ಧಿಯಾಗುತ್ತಿದ್ದು, ಅಭಿವೃದ್ಧಿ ಸಹಿಸದ ರಂಭಾಪುರಿಶ್ರೀಗಳು ಹಾಗೂ ಕೇದಾರ ಸ್ವಾಮೀಜಿಗಳು ಪೀಠವನ್ನ ಹತ್ತಿಕ್ಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮೊದಲು ಈ ಇಬ್ಬರು ಸ್ವಾಮೀಜಿಗಳಿಗೆ ವಯಸ್ಸಾಗಿ ಇವರನ್ನು ಜಗದ್ಗುರು ಸ್ಥಾನದಿಂದ ಕೆಳಗಿಳಿಸಿ ಬೇರೆಯವರನ್ನು ಜಗದ್ಗುರು ಗಳನ್ನಾಗಿ ಮಾಡಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದರು.

ಹಿರೇಹಡಗಲಿ ಹಾಲವೀರಪ್ಪಜ್ಜ ಸ್ವಾಮೀಜಿ– ಹಿರೇಹಡಗಲಿ ಹಾಲವೀರಪ್ಪಜ್ಜ ಸ್ವಾಮೀಜಿ ಮಾತನಾಡಿದರು, ಜಗದ್ಗುರುಗಳು ಸಹಾ ಸಂವಿಧಾನ ವ್ಯಾಪ್ತಿಯಲ್ಲಿ ಬರುತ್ತಾರೆ. ರಂಭಾಪುರಿಶ್ರೀ, ಕೇದಾರಶ್ರೀ ಗಳ ಹೇಳಿಕೆ ವಿರುದ್ದ ಕಾನೂನಾತ್ಮಕ ಹೋರಾಟ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಂದೀಪುರದ ಮಹೇಶ್ವರ ಸ್ವಾಮೀಜಿ ಮಾತನಾಡಿದರು ರಂಭಾಪುರಿ ಜಗದ್ಗುರುಗಳು ಮುಕ್ತಿಮಂದಿರವನ್ನು, ಅನಗತ್ಯ ಗೊಂದಲ ಸೃಷ್ಟಿಸುವ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಮರಿಯಮ್ಮನಹಳ್ಳಿ ಗುರುಪಾದ ಸ್ವಾಮೀಜಿ ಮರಿಯಮ್ಮನಹಳ್ಳಿ ಗುರುಪಾದ ಸ್ವಾಮೀಜಿಗಳು ಮಾತನಾಡಿ, ಕೇದಾರ ಶ್ರೀಗಳು ಈ ಮೊದ್ಲು ಶ್ರೀಶೈಲ ಜಗದ್ಗುರುಗಳ ವಿರುದ್ದ ಕೇಸ್ ಹಾಕಿದ್ದರು. ಈಗ ಉಜ್ಜಿನಿ ಪೀಠದ ವಿರುದ್ದ ಸಮಸ್ಯೆ ಸೃಷ್ಠಿ ಮಾಡಿದ್ದಾರೆ. ಉಜ್ಜಿನಿ ಪೀಠದಲ್ಲಿ ಸಮಸ್ಯೆ ಇದೆ. ಬಗೆಹರಿಸಿ ಬನ್ನಿ ಎಂದು ಈ ಉಬಯ ಜಗದ್ಗುರು ಗಳನ್ನು ಯಾರು ಕರೆದರು.!? ಇಂತಹ ಜಗದ್ಗುರು ಗಳಿಂದ ವೀರಶೈವ ಧರ್ಮ ಹಾಳಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಉಜ್ಜಿನಿ ಪೀಠದ ಜ್ಞಾನ ಗುರು ವಿಧ್ಯಾ ಸಂಸ್ಥೆ ಪೀಠದ ಕಾರ್ಯದರ್ಶಿ ಹರ್ಷವರ್ಧನ, ಅವರ ಗೊಳ್ಳದ ಓಂಕಾರಸ್ವಾಮೀಜಿ,ದೇವರ ಮನಿಕೊಟ್ರೇಶಪ್ಪ, ಈಶ್ವರಗೌಡ್ರು,ಮಾಕುಂಟಿ ಕಲ್ಲಪ್ಪ, ಅಡಕಿ ಮಂಜುನಾಥ. ಲೋಕಪ್ಪ, ಬೇಲಿಗೌಡ್ರು ಸೋಮಣ್ಣ, ಆರ್.ಎಂ.ಗುರುಸ್ವಾಮಿ, ರೇವಯ್ಯ ಮಾತನಾಡಿದರು. ಬೆಣ್ಣೆಹಳ್ಳಿ ಪಂಚಾಕ್ಷರಿ ಸ್ವಾಮೀಜಿ,ಕೂಡ್ಲಿಗಿ ಹಿರೆಮಠದ ಪ್ರಶಾಂತ ಸಾಗರ ಸ್ವಾಮೀಜಿ.ಸಾರಂಗಮಠದ ರವೀಂದ್ರ ಸ್ವಾಮೀಜಿ ಸೆರಿದಂತೆ ಸಮಾಜದ ಮತ್ತಿತರ ಪ್ರಮುಖರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker